11ಕೆಜಿ ತೂಕ ಇಳಿಸಿದ ನಟಿ ಸಮೀರಾ ರೆಡ್ಡಿ! ಫೋಟೋ ವೈರಲ್...

Published on
ಸೌತ್ ನಟಿ ಸಮೀರಾ ರೆಡ್ಡಿ ತಮ್ಮ #FitnessFriday ಗಳ ಬಗ್ಗೆ ತಮ್ಮ Instagram ಅನುಯಾಯಿಗಳ ಜತೆ ಆಗಾಗ ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ. ಹೌದು, ನಟಿ ಪ್ರತಿ ಶುಕ್ರವಾರ ತಮ್ಮ ಫಿಟ್‌ನೆಸ್ ಪ್ರಯಾಣವನ್ನು ಅಭಿಮಾನಿಗಳಿಗೆಂದು ಹಂಚಿಕೊಳ್ಳುತ್ತಾರೆ. ಇನ್ನು, ಅವರು ಎಷ್ಟು ಶಕ್ತಿಯುತವಾಗಿದ್ದಾರೆ, ಅವರ ಆಹಾರ ಪದ್ಧತಿ ಹೇಗೆ ಬದಲಾಗಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಬಿಚ್ಚಿಡುತ್ತಾರೆ. ಸದ್ಯ, ನಟಿ ಸಮೀರಾ ಅವರು 11 ಕೆಜಿ ತೂಕವನ್ನು ಇಳಿಸಿರುವ ವಿಚಾರ ಮತ್ತು ಈ ಫಿಟ್ ಆಗಿರುವ ತಮ್ಮ ಕೆಲಸವನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
ಇದೀಗ, ಸಮೀರಾ, “ಒಂದು ವರ್ಷದ ಹಿಂದೆ ನಾನು ನನ್ನ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ. ಆಗ ನನ್ನ ತೂಕ 92 ಕೆ.ಜಿ. ಇಂದು ನಾನು 81 ಕೆ.ಜಿ'', ಎಂದು ಹೇಳುತ್ತಾ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿಯ ಈ ಫೋಟೋಗೆ ಲಕ್ಷ ಲೈಕ್ಸ್ ಮತ್ತು ಸಾವಿರ ಕಾಮೆಂಟ್​ಗಳು ಸುರಿ ಮಳೆಯಂತೆ ಸುರಿದಿವೆ. ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ನಂತರ ದಪ್ಪವಾದ ಕಾರಣ, ಈಗ ಸಣ್ಣ ಆಗಿ ದಿಲ್ ಖುಷ್ ಆಗಿದ್ದಾರೆ ನಟಿ ಸಮೀರಾ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net