ಹೇಗಿದ್ದ ಲಾರಾ ಹೇಗಾದ್ರು!

Lara dutt
Published on

ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಇನ್ನೇನು ಬಿಡುಗಡೆಯ ಸನಿಹದಲ್ಲಿದೆ. ಮಂಗಳವಾರವಷ್ಟೇ ಬಿಡುಗಡೆ ಆದ ಟ್ರೇಲರ್​ಗೆ ಭಾರೀ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಒಟ್ಟಾರೆ ಮೂರೂವರೆ ನಿಮಿಷದ ಟ್ರೇಲರ್​ನಲ್ಲಿ ಅಕ್ಷಯ್ ಅವರಷ್ಟೇ ಹೆಚ್ಚು ಚರ್ಚೆಗೆ ಗ್ರಾಸವಾದ ಪಾತ್ರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಧಾರಿಯದ್ದು. ಆ ಪಾತ್ರ ಮಾಡಿದ್ದು ಯಾರು ಎಂಬುದು ಬಹುತೇಕರಿಗೆ ಇನ್ನೂ ಗೊತ್ತಾಗಿಲ್ಲ. ಅಷ್ಟಕ್ಕೂ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿದ್ದು ನಟಿ ಲಾರಾ ದತ್ತ!

ರಂಜಿತ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬೆಲ್ ಬಾಟಂ’ ಸಿನಿಮಾ, 1984ರಲ್ಲಿ ನಡೆದ ವಿಮಾನ ಹೈಜಾಕ್ ಪ್ರಕರಣವನ್ನು ಭೇದಿಸುವ ಹಿನ್ನೆಲೆಯಲ್ಲಿ ಸಾಗಲಿದೆ. ಅಕ್ಷಯ್ ಕುಮಾರ್ ‘ಬೆಲ್ ಬಾಟಂ’ ಹೆಸರಿನ ಕೋಡ್​ವರ್ಡ್ ಹೊಂದಿರುವ ಗೂಢಚಾರಿ ಪಾತ್ರ ಮಾಡಿದ್ದಾರೆ. ಇತ್ತ ಲಾರಾ ದತ್ತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರ ಮಾಡಿದ್ದು, ಟ್ರೇಲರ್ ನೋಡಿದಾಗ ಇವರೇನಾ ಲಾರಾ? ಎಂಬಷ್ಟರ ಮಟ್ಟಿಗೆ ಅವರನ್ನು ಮೇಕ್ ಓವರ್ ಮಾಡಲಾಗಿದೆ.

ಸದ್ಯ ಟ್ರೇಲರ್​ನಲ್ಲಿ ಕಾಣಿಸಿದ್ದಿಷ್ಟು. ಅವರ ಪೂರ್ತಿ ಪಾತ್ರ ನೋಡಬೇಕೆಂದರೆ 19ರವರೆಗೂ ಕಾಯಲೇಬೇಕು. ವಾಶು ಭಾಗ್ನಾನಿ, ಜಾಕಿ ಭಾಗ್ನಾನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರೆಟ್ರೋ ಶೈಲಿಯಲ್ಲಿಯೇ ಇಡೀ ಸಿನಿಮಾ ಮೂಡಿಬಂದಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net