

ಬೆಂಗಳೂರು: ಮುಂಜು ಪಾವಗಡ ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಖ್ಯಾತಿ ಗಳಿಸಿದ್ದಾರೆ. ಈ ಬಾರಿಯ ಬಿಗ್ಬಾಸ್ ಸೀಸನ್ 8ರ ವಿನ್ನಿಂಗ್ ಟ್ರೋಫಿ ಮಂಜು ಪಾವಗಡ ಪಾಲಾಗಲಿದೆ ಎಂದು ಅವರ ಅಭಿಮಾನಿಗಳು ದೃಢವಾದ ನಂಬಿಕೆ ಇಟ್ಟುಕೊಂಡಿದ್ದಾರೆ.
ಈ ಮುಂಚೆ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ತುಂಬಾ ಪ್ರಖ್ಯಾತಿಯನ್ನು ಗಳಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರು ಟ್ರೆಂಡ್ ಸೃಷ್ಟಿ ಮಾಡಿದ್ದರು. ಆದರೆ, ಮಂಜು ಪಾವಗಡ ಇದೀಗ ಇಬ್ಬರನ್ನು ಓವರ್ಟೇಕ್ ಮಾಡಿದ್ದಾರೆ. ಕಳೆದ ವಾರದಿಂದ ಮಂಜು ಪಾವಗಡ ಒಳ್ಳೆಯ ವೋಟಿಂಗ್ ಪ್ರಮಾಣವನ್ನು ಪಡೆದುಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೆ.
ಇನ್ನೂ ಅರವಿಂದ್ ಕೆಪಿ ಮತ್ತು ಮಂಜು ಪಾವಗಡ ಮತದಾನ ಸಾಲಿನಲ್ಲಿ ಸಮಾನ ಅಂಕ ಗಳಿಸಿದ್ದಾರೆಂದು ಹೇಳಿದರೆ ತಪ್ಪಾಗುವುದಿಲ್ಲ. ಮಂಜು ದಿಢೀರನೇ ಹೇಗೆ ವೋಟಿಂಗ್ ಪ್ರಮಾಣ ಹೆಚ್ಚಾಯಿತು ಎಂದು ನೋಡುವುದಾದರೆ, ಕಳೆದ ವಾರ ಮನೆಯಿಂದ ಎಲಿಮಿನೇಟ್ ಆದ ಶುಭಾ ಪೂಂಜಾ ಮತ್ತು ಶಮಂತ್ ಬ್ರೋ ಗೌಡ ಕಾರಣ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಬಿಗ್ ಮನೆಯಲ್ಲಿ ಶುಭಾ ಮತ್ತು ಸಮಂತ್ ಬ್ರೋ ಇಬ್ಬರು ಮಂಜು ಪಾವಗಡಗೆ ತುಂಬಾ ಆತ್ಮೀಯವಾಗಿದ್ದರು. ಇದೀಗ ಇಬ್ಬರು ಮನೆಯಿಂದ ಹೊರಬಂದಿರುವುದರಿಂದ ಇಬ್ಬರ ಅಭಿಮಾನಿಗಳು ಮಂಜು ಪಾವಗಡಗೆ ಬೆಂಬಲ ನೀಡುತ್ತಾರೆನ್ನಲಾಗಿದೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಮಂಜು ಪಾವಗಡ ಅವರು ಟ್ರೆಂಡಿಂಗ್ನಲ್ಲಿದ್ದಾರೆ. ಮಂಜುಗೆ ವೋಟ್ ಮಾಡುವಂತೆ ವೀಕ್ಷಕರನ್ನು ಕೇಳಿಕೊಳ್ಳುತ್ತಿದ್ದಾರೆ.
ಈ ಮುಂಚೆ ಅರವಿಂದ್ ಕೆ.ಪಿ ಅಭಿಮಾನಿಗಳು ಮತ್ತು ಮಂಜು ಪಾವಗಡ ಅಭಿಮಾನಿಗಳು ಟ್ವೀಟ್ ವಾರ್ನಲ್ಲಿ ತೊಡಗಿಕೊಳ್ಳುತ್ತಿದ್ದರು. ಏನೇ ಇರಲಿ ಈ ಬಾರಿ ಮಂಜು ಮತ್ತು ಅರವಿಂದ್ ಫೈನಲ್ ಸುತ್ತಿಗೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೂ, ಕೊನೆಯಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಈ ಬಾರಿ ಬಿಗ್ಬಾಸ್ ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಎಂಬ ಕುತೂಹಲ ತುಂಬಾ ಗರಿಗೆದರಿದೆ. ಅದಕ್ಕಾಗಿ ಆಗಸ್ಟ್ 8ರವರೆಗೆ ಎಲ್ಲರೂ ಕಾಯಬೇಕಿದೆ. (ಏಜೆನ್ಸೀಸ್)