ತೆಲುಗು ನಟನ ಜತೆಗೆ ಡೇಟಿಂಗ್​ ಮಾಡ್ತಿದ್ದಾರಾ ಸಂಜನಾ ತಂಗಿ ನಿಕ್ಕಿ?

Nikki - Final
Published on

ಸಂಜನಾ ಗಾಲ್ರಾಣಿ ಅವರ ಸಹೋದರಿ ಗೊತ್ತಲ್ಲ? ಅದೇ ಕನ್ನಡದಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಅಜಿತ್​' ಮತ್ತು ಪ್ರಜ್ವಲ್​ ದೇವರಾಜ್​ ಅಭಿನಯದ 'ಜಂಬೂ ಸವಾರಿ' ಚಿತ್ರದಲ್ಲಿ ನಟಿಸಿದಾಕೆ. ಈ ಚಿತ್ರಗಳ ನಂತರ, ನಿಕ್ಕಿ ಕನ್ನಡಕ್ಕಿಂತ ಪರಭಾಷೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸದೇ ಕೆಲವು ವರ್ಷಗಳೇ ಆಗಿರುವುದರಿಂದ, ಮರತಂತೇ ಆಗಿರುವ ನಿಕ್ಕಿ ಇದೀಗ ಸುದ್ದಿಯಲ್ಲಿದ್ದಾರೆ.

ನಿಕ್ಕಿ ಗಾಲ್ರಾಣಿ ಮತ್ತು ತೆಲುಗು ನಟ ಆದಿ ಪಿನಿಶೆಟ್ಟಿ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅವರಿಬ್ಬರೂ ಎರಡು ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರಿಂದ, ಇಂಥ ಸುದ್ದಿಗಳೆಲ್ಲಾ ಮಾಮೂಲಿ ಎಂದು ಸುಮ್ಮನಾಗಬಹುದಿತ್ತು.

ಆದರೆ, ಇದೀಗ ಆದಿ ಅವರ ತಂದೆ, ಖ್ಯಾತ ನಿರ್ದೇಶಕ ರವಿರಾಜ್ ಪಿನಿಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಿಕ್ಕಿ ಕಾಣಿಸಿಕೊಂಡಿದ್ದಾರೆ. ಕೆಲವೇ ಮಂದಿ ಹಾಜರಿದ್ದ ಈ ಹುಟ್ಟುಹಬ್ಬ ಆಚರಣೆಯಲ್ಲಿ, ಚಿತ್ರರಂಗದಿಂದ ಕಾಣಿಸಿಕೊಂಡವರೆಂದರೆ ಅದು ನಿಕ್ಕಿ ಮಾತ್ರ. ಎಲ್ಲಾ ಬಿಟ್ಟು ನಿಕ್ಕಿ ಮಾತ್ರ ಯಾಕೆ ಅಲ್ಲಿ ಕಾಣಿಸಿಕೊಳ್ಳಬೇಕು? ಆದಿಗೆ ಕ್ಲೋಸ್​ ಆಗಿರುವುದರಿಂದಲೇ ನಿಕ್ಕಿ ಕಾಣಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಅವರಿಬ್ಬರೂ ಡೇಟಿಂಗ್​ ಮಾಡುತ್ತಿರುವ ವಿಷಯಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ.

ಆದಿ ಮತ್ತು ನಿಕ್ಕಿ ಡೇಟಿಂಗ್​ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಬ್ಬರೂ ಅಧಿಕೃತವಾಗಿ ಈ ವಿಷಯವನ್ನು ಎಲ್ಲೂ ಹೇಳಿಕೊಂಡಿಲ್ಲ. ಹಾಗಂತ ಅವರಿಬ್ಬರೂ ಡೇಟಿಂಗ್​ ಮಾಡುತ್ತಿಲ್ಲ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ.

ಸದ್ಯಕ್ಕೆ ಲಾಕ್​ಡೌನ್​ ಸಮಯದಲ್ಲಿ ಒಂದಿಷ್ಟು ಕಥೆಗಳನ್ನು ಕೇಳಿರುವ ಆದಿ ಮತ್ತು ನಿಕ್ಕಿ, ಕರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಹೊಸ ಚಿತ್ರಗಳನ್ನು ಘೋಷಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net