ನಟ ಆಮೀರ್ ಖಾನ್ ಪುತ್ರಿ ಇರಾಖಾನ್-ನೂಪುರ್ ಶಿಖರೆ ಜೋಡಿ ಹನಿಮೂನ್ಗೆ ಎಲ್ಲಿ ಹೋಗಿದ್ದಾರೆ?

amir
Published on

ಇಂಡೋನೇಷ್ಯಾ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ವಿವಾಹವು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಯುವಜೋಡಿಯ ರಿಜಿಸ್ಟರ್ ಮದುವೆಯಾಗಿದ್ದು, ವಿವಾಹ ನೋಂದಣಿಯ ವಿಡಿಯೋ ವೈರಲ್ ಆಗಿತ್ತು. ಈಗ ದಂಪತಿಗಳಿಬ್ಬರು ತಮ್ಮ ಹನಿಮೂನ್‌ಗಾಗಿ ಇಂಡೋನೇಶಿಯಾಗೆ ತೆರೆಳಿದ್ದು, ಅಲ್ಲಿಯ ಸುಂದರ ಕ್ಷಣಗಳ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಪತಿ ನೂಪುರ್ ಶಿಖರೆ ಅವರೊಂದಿಗೆ ತಮ್ಮ ಜೀವನದ ರೋಮಾಂಚಕಾರಿ ಹೊಸ ಹಂತವನ್ನು ಆನಂದಿಸುತ್ತಿದ್ದಾರೆ. ಇರಾ ಹಾಗೂ ನೂಪುರ್‌ ದಂಪತಿಗಳು ಜನವರಿ 3 ರಂದು ತಮ್ಮ ಮದುವೆಯನ್ನು ಅಧಿಕೃತವಾಗಿ ನೊಂದಾಯಿಸಿಕೊಂಡು, ಬಳಿಕ ಉದಯಪುರದಲ್ಲಿ ಮದುವೆಯ ಇತರೆ ಉತ್ಸಾಹಭರಿತ ಸಮಾರಂಭವನ್ನು ತಮ್ಮ ಒಕ್ಕೂಟದೊಂದಿಗೆ ಆಚರಿಸಿದರು. ಈ ಭವ್ಯ ಕಾರ್ಯಕ್ರಮದ ನಂತರ ಮುಂಬೈನಲ್ಲಿ ಅಮೀರ್ ಖಾನ್ ಆಯೋಜಿಸಿದ್ದ ಸ್ಟಾರ್-ಸ್ಟಡ್ ಆರತಕ್ಷತೆ ನಡೆಯಿತು.

ಮದುವೆಯ ಕಾರ್ಯಕ್ರಮದ ನಂತರ ಈ ಜೋಡಿ ತಮ್ಮ ಹನಿಮೂನ್‌ಗಾಗಿ ಇಂಡೋನೇಷ್ಯಾಕ್ಕೆ ಹೊರಟ್ಟಿದ್ದರು. ಇದೀಗ, ಇರಾ ತಮ್ಮ ಸೋಷಿಯಲ್‌ ಮಿಡಿಯಾ ಖಾತೆಯಲ್ಲಿ ಪತಿ ನೂಪುರ್ ಜೊತೆಗೆ ಸಂತೋಷದ ಕ್ಷಣಗಳನ್ನು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇರಾ ಫೋಟೋಗಳ ಪೋಸ್ಟ್‌ನಲ್ಲಿ, "ನಿಮ್ಮ ಹನಿಮೂನ್ ಹೇಗಿತ್ತು?" ನೂಪೂರ್‌ ನಾನು ನಿನ್ನನ್ನು ಪ್ರೀತಿಸುತ್ತೇನೆ , ಒಂದು ತಿಂಗಳು, 4 ವರ್ಷಗಳು, ನೀರೊಳಗಿನ, 3 ಗಂಟೆಗೆ, ತಲೆಕೆಳಗಾಗಿ, ಸ್ಕ್ವಾಟ್‌ನಲ್ಲಿ, ಹವಾಮಾನ ವಿರೋಧಿ, ಹೆಚ್ಚು-ಹವಾಮಾನ... ಪರವಾಗಿಲ್ಲ. ಅದು ನಿನ್ನ ಬಳಿ ಇರುವವರೆಗೆ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಬಾಲಿಗೆ ಹೊರಟಾಗ, ಇರಾ ಖಾನ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಒಳ್ಳೆಯ ಕ್ಷಣಗಳನ್ನು ಹಂಚಿಕೊಂಡರು ಮತ್ತು ಆಕೆ ಪತಿ ನೂಪುರ್ ಶಿಖರೆ ಹನಿಮೂನ್‌ಗೆ ತೆರೆಳುತ್ತುರುವುದರ ಸಂತೋಷವನ್ನು ಕೂಡ ವ್ಯಕ್ತಪಡಿಸಿದರು. ಆಕೆಯ ಶೀರ್ಷಿಕೆಯು, "ನಾವು ಈಗ ಒಟ್ಟಿಗೆ ಇಬ್ಬರು ಪ್ರವಾಸ ಮಾಡುತ್ತಾಯಿದೇವೆ " ಎಂದು ಬರೆದಿದ್ದರು. ಈಕೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಇರಾ ಖಾನ್ ಮತ್ತು ನೂಪುರ್ ಶಿಕಾರೆ ಅವರ ವಿವಾಹವು ನಿಜವಾಗಿಯೂ ಕನಸಿನಂತೆ ಇತ್ತು.

ಇದಕ್ಕೂ ಮೊದಲು, ಇರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಅದ್ಭುತ ಕ್ಷಣಗಳನ್ನು ಒಂದು ಝಲಕ್‌ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ ಅಮೀರ್ ಖಾನ್ ಭಾವನಾತ್ಮಕಾಗಿ ತಮ್ಮ ಪುತ್ರಿಯ ಇರಾ ಮದುವೆಯಾಗುತ್ತಿರುವ ಕ್ಷಣಗಳನ್ನು ವೀಡಿಯೊದಲ್ಲಿ ಸುಂದರವಾಗಿ ಸೆರೆಹಿಡಿದಿದೆ.

ಇರಾ ಶೀರ್ಷಿಕೆಯಲ್ಲಿ, “ಇದು ಕೇವಲ ಟೀಸರ್. ನಾವು ಪ್ರೀತಿಸುವ ಜನರೊಂದಿಗೆ ಪರ್ವತಗಳಲ್ಲಿ ಆಚರಿಸಲು ಬಯಸಿದ್ದೇವೆ. ಮತ್ತು ನಾವು ಮಾಡಿದೆವೆ. ನಾವು ಅಲ್ಲಿದ್ದಾಗ ಇದು ಬೆರಗುಗೊಳಿಸುತ್ತದೆ ಆದರೆ ನಾವು ರಿವೆಂಡೆಲ್‌ನಲ್ಲಿ ಮದುವೆಯಾಗುತ್ತಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಆ ದಿನದ ಎಲ್ಲಾ ಪ್ರೀತಿ ಮತ್ತು ಭಾವನೆಗಳನ್ನು ಪದಗಳಲ್ಲಿ ಹೇಳುವುದು ಕಷ್ಟ. ಅದೃಷ್ಟವಶಾತ್, ನಾವು ಈ ವೀಡಿಯೊವನ್ನು ಹೊಂದಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net