

ಎಲ್ಲ ಸಿನಿರಂಗದಲ್ಲಿಯೂ ಚಿತ್ರಗಳ ಯಶಸ್ಸು ಬಾಕ್ಸ್ಆಫೀಸ್ ಗಳಿಕೆಯ ಮೇಲೆ ನಿಂತಿದೆ. ಈ ಹಿಂದೆ ಸಿನಿಮಾ ಎಷ್ಟು ದಿನ ಚಿತ್ರಮಂದಿರಲ್ಲಿ ಉಳಿಯುತ್ತ ಎಂಬುದರ ಆಧಾರದ ಮೇಲೆ ಯಶಸ್ಸನ್ನು ಅಳೆಯಲಾಗುತ್ತಿತ್ತು. ಆದರೀಗ ಎಷ್ಟು ಗಳಿಕೆ ಮಾಡಿತು ಎಂಬುದು ಯಶಸ್ಸಿನ ಮಾನದಂಡವಾಗಿದೆ. ಯಾವುದೇ ಬಾಕ್ಸ್ಆಫೀಸ್ನಲ್ಲಿ ಫ್ಲಾಪ್ ಮತ್ತು ಸೂಪರ್ ಹಿಟ್ ಆಟ ಮುಂದುವರಿದಿದೆ. ನಾವಿಂದು ಓರ್ವ ಸೂಪರ್ಸ್ಟಾರ್ ಚಿತ್ರದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಚಿತ್ರಕ್ಕೆ 100 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸಿನಿಮಾ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ದುರಂತದಲ್ಲಿ ಕೊನೆಯಾಯಿತು. ಅಂದರೆ, ಕನಿಷ್ಠ ಪಕ್ಷ ಹಾಕಿದ ಬಂಡವಾಳವೂ ಕೂಡ ಸಿಗಲಿಲ್ಲ. ಇದು ಭಾರತದ ಅತಿದೊಡ್ಡ ಫ್ಲಾಫ್ ಸಿನಿಮಾ ಎಂಬ ಅಪಖ್ಯಾತಿಗೆ ಒಳಗಾಗಿದೆ.
ಅಂದಹಾಗೆ ಅಜಯ್ ದೇವಗನ್ ಒಬ್ಬ ಶ್ರೇಷ್ಠ ನಟ ಮಾತ್ರವಲ್ಲದೆ ಅತ್ಯುತ್ತಮ ನಿರ್ದೇಶಕ ಕೂಡ ಹೌದು. ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಮತ್ತು ಆ ಚಿತ್ರಗಳು ಹೆಚ್ಚು ಮೆಚ್ಚುಗೆ ಸಹ ಪಡೆದಿವೆ. ಆದರೆ, ದೇವಗನ್ ಗಲ್ಲಾಪೆಟ್ಟಿಗೆಯಲ್ಲಿ ತಮ್ಮ ವೈಫಲ್ಯವನ್ನು ಎದುರಿಸಬೇಕಾಯಿತು. ತಮ್ಮ ಚಿತ್ರವೊಂದಕ್ಕೆ 100 ಕೋಟಿಗೂ ಹೆಚ್ಚು ಖರ್ಚು ಮಾಡಿದರು. ಆದರೆ, ಆ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಬಂಡವಾಳವನ್ನು ಮರುಪಡೆಯಲು ಸಹ ಸಾಧ್ಯವಾಗಲಿಲ್ಲ.
2022 ರಲ್ಲಿ ಅಜಯ್ ದೇವಗನ್, ರನ್‌ವೇ 34 ಎಂಬ ಚಲನಚಿತ್ರವನ್ನು ನಿರ್ದೇಶನ ಮಾಡಿದರು. ಇದರಲ್ಲಿ ಅಮಿತಾಬ್ ಬಚ್ಚನ್ ಮತ್ತು ಬೊಮನ್ ಇರಾನಿ ಅವರೊಂದಿಗೆ ದೇವಗನ್, ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ದೊಡ್ಡ ತಾರಾ ಬಳಗದ ಹೊರತಾಗಿಯೂ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಲಿಲ್ಲ. ರನ್‌ವೇ 34 ಚಿತ್ರದಲ್ಲಿ ಅಜಯ್ ದೇವಗನ್ ಕ್ಯಾಪ್ಟನ್ ವಿಕ್ರಾಂತ್ ಖನ್ನಾ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶನದ ಹೊಣೆಯನ್ನೂ ಅವರೇ ವಹಿಸಿಕೊಂಡು ಚಿತ್ರ ನಿರ್ಮಿಸಿದರು. ಬಿಡುಗಡೆಯಾದ ನಂತರ, ಚಿತ್ರವು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಸಹ ಪಡೆಯಿತು. ಆದರೆ, ವಿಧಿ ಆಟವೇ ಬೇರೆ ಇತ್ತು. ಏನೆಂದರೆ, ರನ್‌ವೇ 34 ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲೇ ಇಲ್ಲ.
ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಅಜಯ್ ದೇವಗನ್ ಅವರ 'ರನ್‌ವೇ 34' ಚಿತ್ರ ನಿರ್ಮಿಸಲು 105 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಆದರೆ, ಬಿಡುಗಡೆಯಾದ ಬಳಿಕ ಲಾಭವಿರಲಿ ಅಸಲು ಕೂಡ ಸಿಗಲಿಲ್ಲ. 2022, ಏಪ್ರಿಲ್ 29 ರಂದು ಬಿಡುಗಡೆಯಾದ ರನ್‌ವೇ 34 ಬಾಕ್ಸ್ ಆಫೀಸ್‌ನಲ್ಲಿ ಕೇವಲ 3 ಕೋಟಿ ರೂಪಾಯಿಗಳೊಂದಿಗೆ ತನ್ನ ಮೊದಲ ದಿನದ ಖಾತೆಯನ್ನು ತೆರೆಯಿತು. ಅಜಯ್ ದೇವಗನ್ ಚಿತ್ರದ ಅತಿ ಕಡಿಮೆ ಸಂಖ್ಯೆ ಇದಾಗಿದೆ. ಸಾಮಾನ್ಯವಾಗಿ ದೇವಗನ್ ಸಿನಿಮಾಗಳು ಆರಂಭಿಕ ದಿನದಲ್ಲಿ 7 ರಿಂದ 8 ಕೋಟಿ ರೂ. ಗಳಿಸುತ್ತವೆ.
ಭಾರತದಲ್ಲಿ 'ರನ್‌ವೇ 34' ಕೇವಲ 32 ಕೋಟಿ ರೂ. ಗಳಿಸಿದರೆ, ಅದೇ ಸಮಯದಲ್ಲಿ, ಈ ಚಿತ್ರವು ವಿಶ್ವಾದ್ಯಂತ ಕೇವಲ 54.71 ಕೋಟಿ ರೂಪಾಯಿಗಳ ವ್ಯವಹಾರ ಮಾಡಿತು. ಆದರೆ, 105 ಕೋಟಿ ರೂ.ಗೆ ತಯಾರಾದ ರನ್‌ವೇ 34 ಬಾಕ್ಸ್ ಆಫೀಸ್‌ನಲ್ಲಿ ತನ್ನ ವೆಚ್ಚದ ಅರ್ಧದಷ್ಟು ಮಾತ್ರ ವಸೂಲಿ ಮಾಡಲು ಸಾಧ್ಯವಾಯಿತು ಎಂಬುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. ಅಜಯ್ ದೇವಗನ್ ಅವರ ಈ ಚಿತ್ರವು ಅತಿದೊಡ್ಡ ಫ್ಲಾಪ್ ಎಂಬ ಅಪಖ್ಯಾತಿಗೆ ಗುರಿಯಾಗಿದೆ.
ಮುಂದಿನ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಅಜಯ್ ದೇವಗನ್ ಶೀಘ್ರದಲ್ಲೇ ಸಿಂಗಮ್ ಎಗೇನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಸೂಪರ್‌ಹಿಟ್ ಸಿಂಗಂ ಸಿನಿಮಾದ ಸರಣಿಯಾಗಿದೆ. ಇದೇ ಸರಣಿಯ ಕೊನೆಯ ಎರಡು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬಹಳ ಯಶಸ್ವಿಯಾದವು. ರೋಹಿತ್ ಶೆಟ್ಟಿ 'ಸಿಂಗಮ್ ಎಗೇನ್' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಈ ಚಿತ್ರದ ಭಾಗವಾಗಿದ್ದಾರೆ. (ಏಜೆನ್ಸೀಸ್)