More

    ಮಾಡೆಲ್​, ನಟಿ ಪೂನಂ ಪಾಂಡೆ ದುರಂತ ಸಾವು! 32 ವರ್ಷಕ್ಕೆ ಬದುಕು ಅಂತ್ಯ, ಸುದ್ದಿ ಖಚಿತಪಡಿಸಿದ ಮ್ಯಾನೇಜರ್​

    ಮುಂಬೈ: ಮಾಡೆಲ್​ ಹಾಗೂ ನಟಿ ಪೂನಂ ಪಾಂಡೆ ಗರ್ಭಕೋಶದ ಕ್ಯಾನ್ಸರ್​ನಿಂದಾಗಿ ಫೆಬ್ರವರಿ 1ರಂದು ಮೃತಪಟ್ಟಿರುವುದಾಗಿ ಆಕೆಯ ತಂಡ ಶುಕ್ರವಾರ (ಫೆ.02) ಬೆಳಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಗುರುವಾರ ರಾತ್ರಿ ಪೂನಂ ಪಾಂಡೆ ಸಾವಿಗೀಡಾಗಿದ್ದಾರೆ ಎಂದು ಅವರ ತಂಡ ಮಾಧ್ಯಮಗಳಿಗೆ ಖಚಿತಪಡಿಸಿದೆ. ಕೊನೆಯುಸಿರೆಳೆದಾಗ ಆಕೆ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದಲ್ಲಿದ್ದಳು. ಆಕೆಯ ಅಂತ್ಯಕ್ರಿಯೆಯ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ತಂಡ ಮಾಹಿತಿ ನೀಡಿದೆ.

    ಈ ಮುಂಜಾನೆಯು ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಂತ ರೂಪವೂ ಶುದ್ಧ ಪ್ರೀತಿ ಮತ್ತು ದಯೆಯಿಂದ ಭೇಟಿಯಾಯಿತು ಎಂದು ಪೂನಂ ಅವರ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಇನ್ನು ಪೂನಂ ಪಾಂಡೆಯ ಸಾವಿನ ಸುದ್ದಿಯನ್ನು ಅನೇಕರು ಗಂಭೀರವಾಗಿ ತೆಗೆದುಕೊಂಡಿಲ್ಲ. ಅದರಲ್ಲೂ ಅಭಿಮಾನಿಗಳು ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಘಾತಕ್ಕೂ ಒಳಗಾಗಿದ್ದಾರೆ. ಕೆಲವರು ಬೇಸರವನ್ನು ವ್ಯಕ್ತಪಡಿಸಿದರೆ, ಕೆಲವರು ಇದು ಪ್ರಚಾರದ ಗಿಮಿಕ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಮತ್ತೊಂದು ಪೋಸ್ಟ್ ಬಂದರೂ ಬರಬಹುದು ಎನ್ನುತ್ತಿದ್ದಾರೆ. ಆದರೆ, ಪೂನಂ ಸಾವಿನ ಸುದ್ದಿಯನ್ನು ಅವರ ಮ್ಯಾನೇಜರ್​ ಖಚಿತಪಡಿಸಿದ್ದಾರೆ.

    ಬಹಳ ಹಿಂದೆಯೇ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ, ಅದು ಕೊನೆಯ ಹಂತದಲ್ಲಿತ್ತು. ಪೂನಂ ಅವರು ತಮ್ಮ ತವರೂರಿನಲ್ಲಿದ್ದರು. ಅಲ್ಲಿಯೇ ಕೊನೆಯುಸಿರೆಳೆದಿದ್ದು, ಅಂತ್ಯಕ್ರಿಯೆಯು ಹೆಚ್ಚಾಗಿ ಅಲ್ಲಿಯೇ ನಡೆಯಲಿದೆ ಎಂದು ಮ್ಯಾನೇಜರ್​ ಪಾರುಲ್ ಚಾವ್ಲಾ ತಿಳಿಸಿದ್ದಾರೆ.

    ಪೂನಂ ಅವರು 2013ರ ‘ನಶಾ’ ಚಿತ್ರದ ಮೂಲಕ ತಮ್ಮ ನಟನೆಗೆ ಪದಾರ್ಪಣೆ ಮಾಡಿದರು. ಆಕೆ ಕೊನೆಯದಾಗಿ ರಿಯಾಲಿಟಿ ಶೋ ‘ಲಾಕ್ ಅಪ್’ ನಲ್ಲಿ ಕಾಣಿಸಿಕೊಂಡರು. ಇನ್ನೂ ಪೂನಂ ಪಾಂಡೆ ಬಹುಮುಖಿ ವ್ಯಕ್ತಿತ್ವ, ಮನರಂಜನಾ ಲೋಕದಲ್ಲಿ ತನ್ನ ಬೋಲ್ಡ್​ ನಟನೆಗಾಗಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಅವತಾರಕ್ಕೆ ಹೆಸರುವಾಸಿಯಾಗಿದ್ದರು. (ಏಜೆನ್ಸೀಸ್​)

    ರೂಮಿನಲ್ಲಿ ನಯನತಾರಾ ಅವತಾರ ಕಂಡು ಮೈಮರೆತಿದ್ದೆ! ಶರತ್​ ಕುಮಾರ್​ ಓಪನ್​ ಟಾಕ್​

    ಬ್ರಾಲೆಸ್​ ಆಗಿ ಸಾರ್ವಜನಿಕ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಪೂನಂ ಪಾಂಡೆ: ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts