ಮದ್ವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಶ್ರುತಿ! ಸೌತ್​ ಬ್ಯೂಟಿ ಕೊಟ್ಟ ಉತ್ತರ ವೈರಲ್​

Shruti Hassan
Published on

ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಅಂದಹಾಗೆ ತಾರೆಯರ ಬದುಕು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಭಿನ್ನವಾಗಿರುತ್ತದೆ. ಅದಕ್ಕೆ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ಏಕೆಂದರೆ, ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸಾಕಷ್ಟು ಸುದ್ದಿಯಾಗಿದ್ದಾರೆ.

ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಇದೀಗ ಬಾಯ್​ಫ್ರೆಂಡ್​ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಶ್ರುತಿ ಜೀವನದಲ್ಲಿ ಅನೇಕರು ಬಂದು ಹೋಗಿದ್ದಾರೆ. ಸದ್ಯ ಶ್ರುತಿ ಹಾಸನ್ ಅವರ ಬಾಯ್ ಫ್ರೆಂಡ್ ಹುದ್ದೆ ಖಾಲಿ ಇದೆ. ಇತ್ತೀಚೆಗಷ್ಟೇ ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.

ಬಾಯ್ ಫ್ರೆಂಡ್ ಶಾಂತನು ಹಜಾರಿಕಾ ಜೊತೆಗಿನ ಬ್ರೇಕಪ್ ಆದ ನಂತರ ಶ್ರುತಿ ಕೇವಲ ಸಿನಿಮಾಗಳತ್ತ ಗಮನ ಹರಿಸದೆ ಆ ನೋವನ್ನು ಹೋಗಲಾಡಿಸಲು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾರೆ. ಅದಲ್ಲದೆ, ಸಾಧ್ಯವಾದಾಗಲೆಲ್ಲ ಸೋಶಿಯಲ್ ಮೀಡಿಯಾದಲ್ಲಿ ನೆಟಿಗ್ಗರು ಹಾಗೂ ಅಭಿಮಾನಿಗಳೊಂದಿಗೆ ಚಾಟ್ ಸೆಷನ್ ನಡೆಸುತ್ತಿರುತ್ತಾರೆ.

ಇತ್ತೀಚೆಗೆ ಈ ಬ್ಯೂಟಿ ಚಾಟ್ ಸೆಷನ್ ನಡೆಸಿದರು. ಈ ವೇಳೆ ನೆಟ್ಟಿಗನೊಬ್ಬ ನೀವು ಯಾವ ರೀತಿಯ ವ್ಯಕ್ತಿಯನ್ನು ಮದುವೆಯಾಗುತ್ತೀರಿ? ಎಂದು ಪ್ರಶ್ನಿಸಿದನು. ಇದಕ್ಕೆ ಉತ್ತರಿಸಿದ ಶ್ರುತಿ, ಇದು 2024... ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿ ಎಂದು ಖಾರವಾಗಿಯೇ ಉತ್ತರಿಸಿದರು.

Shruti Haasan 2

ಅಲ್ಲದೇ ಮತ್ತೊಬ್ಬ ನೆಟ್ಟಿಗ ಮೇಡಂ ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದಾಗ ನಾನು ಮದುವೆ ಆಗುವುದಿಲ್ಲ ಸರ್ ಎಂದು ಉತ್ತರಿಸಿದ್ದಾರೆ. ಈ ಮೂಲಕ ನಾನು ಮದುವೆಯಾಗದೇ ಸಿಂಗಲ್ ಆಗಿಯೇ ಇರುತ್ತೇನೆ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ಶ್ರುತಿ ರವಾನಿಸಿದ್ದಾರೆ.

Shruti Haasan 1

ಇನ್ನು ಶ್ರುತಿ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ, ಈ ಚೆಲುವೆ ನಟ ಅಡಿವಿಶೇಷ್​ ಜೊತೆ ‘ಡಕಾಯಿತ್' ಸಿನಿಮಾ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ 'ಸಲಾರ್ 2' ಮತ್ತು ತಮಿಳಿನಲ್ಲಿ 'ಚೆನ್ನೈ ಸ್ಟೋರಿ' ಕೂಡ ಮಾಡಲಿದ್ದಾರೆ. ಸದ್ಯ ಶ್ರುತಿ ಸಂಪೂರ್ಣ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net