ನಾನೀಗ ಚೆನ್ನಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ; ಜಯಶ್ರೀ ರಾಮಯ್ಯ

nati-jpg_710x400xt
Published on

ಫೇಸ್​ಬುಕ್​ ಫೋಸ್ಟ್ ಮೂಲಕ ಆತಂಕ ಮೂಡಿಸಿದ್ದ ನಟಿ ಜಯಶ್ರೀ ಇದೀಗ ಮತ್ತೊಂದು ಪೋಸ್ಟ್ ಹಾಕಿ ತಾವು ಕ್ಷೇಮವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಸ್ನೇಹಿತರ ವಲಯದಲ್ಲಿ ಸೃಷ್ಟಿಯಾಗಿದ್ದ ಆತಂಕವನ್ನು ನಿವಾರಣೆ ಮಾಡಿದ್ದಾರೆ.

ಹೌದು ತಾವು ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ ನಟಿ ಜಯಶ್ರೀ, ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್​ಬೈ’ ಎಂದು ಬರೆದುಕೊಂಡಿದ್ದರು.ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ನೇಹಿತರು ಜಯಶ್ರೀ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಯಾರ ಕರೆಯನ್ನೂ ಅವರು ಸ್ವೀಕರಿಸುತ್ತಿರಲಿಲ್ಲ.

ನಟಿ ಅದ್ವಿತಿ ಶೆಟ್ಟಿ, ಆರೋಹಿ ನಾರಾಯಣ್​, ನಿರ್ದೇಶಕ ಮಯೂರ ರಾಘವೇಂದ್ರ ಸೇರಿ ಸಾಕಷ್ಟು ಮಂದಿ ಆತುರದ ನಿರ್ಧಾರಕ್ಕೆ ಮುಂದಾಗಬೇಡ ಎಂದು ಕಮೆಂಟ್ ಮೂಲಕ ಮನವಿ ಮಾಡಿ, ಸಮಾಧಾನ ಪಡಿಸಿದ್ದರು. ಕೊನೆಗೂ ಅವರೆಲ್ಲರ ಮಾತಿಗೆ ಮಣಿದು, ಸುರಕ್ಷಿತವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಖಿನ್ನತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹೋದರ ಮತ್ತು ಅಮ್ಮ, ಜಯಶ್ರಿ ಜತೆಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net