ಮಂಥನ್ ಅಗರಬತ್ತಿಗೆ ಹೃತಿಕ್ ರೋಷನ್​ ರಾಯಭಾರಿ

Hrithik
Published on

ಬೆಂಗಳೂರು: ಎಂಡಿಪಿಎಚ್ (ಮೈಸೂರು ದೀಪ್ ಫರ್ಫಮೆರಿ ಹೌಸ್) ಕಂಪನಿಯ ಝೆಡ್ ಬ್ಲಾಕ್ 3 ಇನ್ 1 ‘ಮಂಥನ್’ ಅಗರಬತ್ತಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ರಾಯಭಾರಿಯಾಗಿದ್ದಾರೆ. ಈಗಾಗಲೇ ತಮ್ಮ ನಟನೆ ಮತ್ತು ನೃತ್ಯದಿಂದಲೇ ವಿಶ್ವದ ಮನೆ ಮಾತಾಗಿರುವ ಹೃತಿಕ್, ಇದೀಗ ‘ಮಂಥನ್’ ಅಗರಬತ್ತಿ ಬ್ರಾಂಡ್ ಅನ್ನು ದೇಶಾದ್ಯಂತ ಪರಿಚಯಿಸಲಿದ್ದಾರೆ. ಕಳೆದ 25 ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ‘ಮಂಥನ್’ ಅಗರಬತ್ತಿ, ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹಿರಿದಾಗಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡುವ ಕಂಪನಿಯ ನಿರ್ದೇಶಕ ಮತ್ತು ಪಾಲುದಾರ ಅನ್ಶುಲ್ ಅಗರ್​ವಾಲ್, ‘ಹೃತಿಕ್ ಅವರೊಂದಿಗೆ ಕೈ ಜೋಡಿಸಿದ್ದಕ್ಕೆ ನಮ್ಮ ಬ್ರಾಂಡ್ ರಾಷ್ಟ್ರದ ಮೂಲೆ ಮೂಲೆ ತಲುಪಲಿದೆ.

ಇದೇ ಮೊದಲ ಬಾರಿಗೆ ಅಗರಬತ್ತಿ ಕಂಪನಿಯೊಂದು ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಕ್ರಿಕೆಟಿಗ ಎಂ.ಎಸ್. ಧೋನಿ ಈಗಾಗಲೇ ನಮಗೆ ರಾಯಭಾರಿಯಾಗಿದ್ದಾರೆ. ಇದೀಗ ಹೃತಿಕ್ ಮೂಲಕ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ. ಐಪಿಎಲ್ ಸೀಸನ್ ಶುರುವಾಗಿದ್ದು, ಟಿವಿ ಜಾಹೀರಾತು ಪ್ರಸಾರವಾಗಲಿದೆ’ ಎಂಬುದು ಅವರ ಮಾತು. 1992ರಲ್ಲಿ ಈ ಕಂಪನಿ ಶುರುವಾಗಿದ್ದು, ದೇಶಾದ್ಯಂತ 5 ಫ್ಯಾಕ್ಟರಿಗಳು, 35 ಪ್ರಾದೇಶಿಕ ಕಚೇರಿಗಳು, 3000 ಕೆಲಸಗಾರರು, 1200ಕ್ಕೂ ಅಧಿಕ ಉತ್ಪನ್ನಗಳಿದ್ದು, 30 ದೇಶಗಳಿಗೆ ಉತ್ಪನ್ನಗಳು ರಫ್ತಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net