ಹೃತಿಕ್​ ಖರೀದಿಸಿದ ಎರಡು ಫ್ಲಾಟ್​ಗಳ ಬೆಲೆ ಎಷ್ಟು ಹೇಳಿ?

Hrithik Roshan - Final
Published on

ಮುಂಬೈ: ಇತ್ತೀಚೆಗಷ್ಟೇ ಕಂಗನಾ ರಣಾವತ್​, ತಾವು ಮುಂಬೈನಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ, ತಮ್ಮ ಮಾಜಿ ಬಾಯ್​ಫ್ರೆಂಡ್​ (ಹೃತಿಕ್​ ರೋಶನ್​) ಇನ್ನೂ ಬಾಡಿಗೆ ಫ್ಲಾಟ್​ನಲ್ಲಿ ವಾಸಿಸುತ್ತಿದ್ದಾರೆ ಎಂದು ಕಾಲೆಳೆದಿದ್ದರು. ಬಾಡಿಗೆ ಮನೆಯಾದರೂ ಹೃತಿಕ್​ ರೋಶನ್​ ಆ ಮನೆಗೆ ಪ್ರತಿ ತಿಂಗಳು 8.25 ಲಕ್ಷ ಬಾಡಿಗೆ ಕಟ್ಟುತ್ತಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ.

ಈಗ ಬಾಡಿಗೆ ಮನೆ ಬಿಟ್ಟು, ಸ್ವಂತ ಮನೆಗೆ ಹೋಗುವುದಕ್ಕೆ ಹೃತಿಕ್​ ರೋಶನ್​ ತೀರ್ಮಾನಿಸಿದ್ದಾರೆ. ಮುಂಬೈನ ಜುಹು-ವರ್ಸೋವಾ ಲಿಂಕ್​ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ಮೆಂಟ್​ವೊಂದರಲ್ಲಿ ಎರಡು ಫ್ಲಾಟ್​​ಗಳನ್ನು ಹೃತಿಕ್​ ಖರೀದಿಸಿದ್ದು, ಈ ಫ್ಲಾಟ್​​ಗಳ ಬೆಲೆ ಎಷ್ಟು ಗೊತ್ತಾ? 97.50 ಕೋಟಿ ಎಂದು ಹೇಳಲಾಗಿದೆ.

ಈ ಪೈಕಿ ಒಂದು ಡ್ಯುಪ್ಲೆ ಪೆಂಟ್​ಹೌಸ್​ ಆದರೆ, ಇನ್ನೊಂದು ಸಿಂಗಲ್​ ಸ್ಟೋರಿ ಮನೆಯಾಗಿದೆ. ಈ ಮನೆಗಳಿಗೆ ಹೋಗುವುದಕ್ಕೆಂದೇ ಪ್ರತ್ಯೇಕ ಲಿಫ್ಟ್​ಗಳಿದ್ದು, ಹೃತಿಕ್​ ಕುಟುಂಬಕ್ಕೆ 10 ಪಾರ್ಕಿಂಗ್​ ಲಾಟ್​ಗಳನ್ನು ನೀಡಲಾಗಿದೆಯಂತೆ.

ಈ ಎರಡೂ ಫ್ಲಾಟ್​ಗಳು ಒಟ್ಟು 38 ಸಾವಿರ ಚದರಡಿ ವಿಸ್ತೀರ್ಣವಾಗಿದ್ದು, ಈ ಪೈಕಿ ಟೆರೇಸ್​ ಆರೂವರೆ ಸಾವಿರ ಚದರಡಿ ಇದೆಯಂತೆ. ಈ ಪೈಕಿ ಡ್ಯೂಪ್ಲೇ ಮನೆಗೆ ಹೃತಿಕ್​ ಕೊಟ್ಟಿರುವ ಮೊತ್ತ 67.50 ಕೋಟಿ ಎಂದು ಹೇಳಲಾಗುತ್ತಿದೆ. ಈ ಮನೆ 15 ಮತ್ತು 16ನೇ ಮಹಡಿಯಲ್ಲಿದ್ದು, ಇದರ ಜತೆಗೆ 14ನೇ ಮಹಡಿಯಲ್ಲಿರುವ ಇನ್ನೊಂದು ಮನೆಯನ್ನು 30 ಕೋಟಿ ರೂಗಳನ್ನು ಕೊಟ್ಟು ಖರೀದಿಸಿದ್ದಾರಂತೆ. ಈ ಎರಡೂ ಮನೆಗಳ ಮೊತ್ತ 97.50 ಕೋಟಿ ರೂಗಳಾಗಿದ್ದು, ರಿಜಿಸ್ಟ್ರೇಶನ್​ಗೇ ಸುಮಾರು ಎರಡು ಕೋಟಿಯಷ್ಟು ಅವರು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಸಣ್ಣ-ಪುಟ್ಟ ರಿಪೇರಿಗಳು, ಅದು-ಇದು ಎಂದು ಈ ಎರಡು ಮನೆಗಳಿಂದ ಹೃತಿಕ್​ ಸುಮಾರು 100 ಕೋಟಿ ರೂಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net