

ಇವತ್ತು ಬೆಳಿಗ್ಗೆಯಿಂದ ಸೆಲೆಬ್ರಿಟಿ ಕಪಲ್ ಅನುಷ್ಕಾ ಮತ್ತು ವಿರಾಟ್ ಕೋಹ್ಲಿ ಅವರದ್ದೇ ಸುದ್ದಿ. ಗುರುವಾರ ಬೆಳಿಗ್ಗೆ, ಟ್ವಿಟರ್ ಮೂಲಕ ಅನುಷ್ಕಾ ಶರ್ಮಾ ಅವರು ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು ಎಂದು ಹೇಳಿಕೊಂಡಿದ್ದಾರೆ. 2021 ಜನವರಿಗೆ ಬರುತ್ತಿದ್ದೇವೆ ಎಂದು ಅಡಿಬರಹ ಸಹ ಬರೆದುಕೊಂಡಿದ್ದಾರೆ.
ಅನುಷ್ಕಾ ಗರ್ಭಿಣಿ ಎಂಬ ಸುದ್ದಿಯನ್ನು ಘೋಷಿಸುತ್ತಿದ್ದಂತೆ ಇದೀಗ ಟ್ವಿಟರ್ನಲ್ಲಿ #Virushka ಟ್ರೆಂಡ್ ಆಗಿದೆ. ಅಷ್ಟೇ ಅಲ್ಲ, ವಿರೂಷ್ಕಾ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸಾಕಷ್ಟು ಮೀಮ್ಗಳು ಹರಿದು ಬರುತ್ತಿವೆ.
ಈ ಮಧ್ಯೆ, ಇನ್ನೊಂದು ವಿಷಯ ಬಹಳ ಚರ್ಚೆಯಾಗುತ್ತಿದೆ. ಅನುಷ್ಕಾ ಶರ್ಮಾ ಇವತ್ತು ಒಂದು ಫೋಟೋ ಹಾಕಿದ್ದಾರಲ್ಲ, ಆ ಫೋಟೋದಲ್ಲಿ ಅವರೊಂದು ಪೋಲ್ಕಾ ಡಾಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅ ಡ್ರೆಸ್ನ ಬೆಲೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.
ಈ ಚರ್ಚೆಗೆ ಕಾರಣವೂ ಇದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಾವು ತೊಡುವ ಡ್ರೆಸ್ಗಳು ದೊಡ್ಡ ಮೊತ್ತ ಖರ್ಚು ಮಾಡುತ್ತಾರೆ. ಅದರಲ್ಲೂ ಅನುಷ್ಕಾ ಶರ್ಮಾ ತೊಡುವ ಒಂದೊಂದು ಡ್ರೆಸ್ಗಳು ಸಹ ಕಾಸ್ಟ್ಲಿ ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಅನುಷ್ಕಾ ತೊಟ್ಟಿರುವ ಪೋಲ್ಕಾ ಡಾಟ್ ಡ್ರೆಸ್ನ ಬೆಲೆ ಏನಿರಬಹುದು ಎಂಬ ಗುಸುಗುಸು ಇದೀಗ ಪ್ರಾರಂಭವಾಗಿದೆ.
ಮೂಲಗಳ ಪ್ರಕಾರ, ಈ ಡ್ರೆಸ್ ಡಿಸೈನ್ ಮಾಡಿರುವುದು ನಿಖೋಲಾಸ್ ಮತ್ತು ಇದರ ಬೆಲೆ 595 ಅಮೇರಿಕಾ ಡಾಲರ್ ಎಂದು ಹೇಳಲಾಗುತ್ತದೆ. ಅದನ್ನೇ ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದರೆ, ಅದರ ಮೊತ್ತ ಎಷ್ಟಾಗುತ್ತದೆ ಗೊತ್ತಾ? 45 ಸಾವಿರ ರೂಪಾಯಿಗಳು ಮಾತ್ರ.
ಒಂದು ಡ್ರೆಸ್ಗೆ ಇಷ್ಟೊಂದು ಮೊತ್ತ ಯಾರಾದರೂ ಕೊಡುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಸಹಜವೇ. ಆದರೆ, ಸೆಲೆಬ್ರಿಟಿಗಳಿಗೆ ಇದೇನೂ ಅಷ್ಟು ದೊಡ್ಡ ಮೊತ್ತವಲ್ಲ. ಇದಕ್ಕಿಂತ ಇನ್ನೂ ಜಾಸ್ತಿ ಬೆಲೆಯ ಡ್ರೆಸ್ಗಳನ್ನು ಅವರು ತೊಡುವುದರಿಂದ, ಇದು ಕಡಿಮೆ ಎಂದರೆ ತಪ್ಪಿಲ್ಲ.