ಬಿಡುಗಡೆ ಸನಿಹದಲ್ಲಿ ಹಾರರ್ 'ಅನಘ'

collage (6)
Published on

ಬೆಂಗಳೂರು: ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ ಅನಘ ಬಿಡುಗಡೆಗೆ ಸಿದ್ದವಾಗಿದೆ. ರಾಜು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಿ ಪಿ ಮಂಜುಳ ನಿರ್ಮಾಪಕಿಯಾಗಿ ಬಂಡವಾಳ ಹೂಡಿದ್ದಾರೆ. ನಾಯಕ, ನಾಯಕಿ ಸೇರಿ ಬಹುತೇಕ ಹೊಸ ಪ್ರತಿಭೆಗಳೇ ಅಭಿನಯಿಸಿದ ಈ ಚಿತ್ರ, ಸಸ್ಪೆನ್ಸ್, ಹಾರರ್, ಕಾಮಿಡಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗುತ್ತಿದೆ.

ಈಗಾಗಲೇ ಅನಘ ಚಿತ್ರದ ಶೂಟಿಂಗ್ ಹಾಗೂ ಚಿತ್ರೀಕರಣೋತ್ತರ ಕೆಲಸಗಳು ಮುಗಿದಿದ್ದು, ಪ್ರಚಾರ ಕೆಲಸಕ್ಕೆ ಅಣಿಯಾಗುತ್ತಿದೆ. ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆಗಳಾದ ನಳೀನ್ ಕುಮಾರ್ ಮತ್ತು ಪವನ್ ಪುತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರದಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ಶ್ರೀನಿವಾಸ್ ಗೌಡ್ರು, ಕಿರಣ ತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ಖುಷಿ, ರಶ್ಮಿ, ವಿಶೇಷ ಪಾತ್ರದಲ್ಲಿ ನಂಜಪ್ಪ. ಮೋಟು ರವಿ, ಅಭಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ರಾಜು ಎನ್. ಆರ್. ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕಿದ್ದು, ಬೆಂಗಳೂರು ಹಾಗೂ ದೇವರಾಯನ ದುರ್ಗ ಸುತ್ತ ಮುತ್ತ ಚಿತ್ರಿಕರಿಸಿದ್ದಾರೆ. ಈ ಚಿತ್ರಕ್ಕೆ ಶಂಕರ್ ಅವರ ಕ್ಯಾಮರಾ ಕೈಚಳಕ ಇದ್ದು, ಅವಿನಾಶ್ ಸಂಗೀತ ನೀಡಿದ್ದಾರೆ. ವೆಂಕಿ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಅಂದುಕೊಂಡಂತೆ ಆದರೆ ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net