ಚಿತ್ರದ ಅಭಿಮಾನಿಗಳು ಈ ಪರಿ ರೆಸ್ಪಾನ್ಸ್ ನೀಡಿರುವುದು ಚಿತ್ರತಂಡಕ್ಕೆ ತುಂಬಾನೆ ಖುಷಿ ಕೊಟ್ಟಿದ್ದು, ಆಯ್ಕೆಯಾದ ಕೆಲವು ಫ್ಯಾನ್ ಮೇಡ್ ಪೋಸ್ಟರ್ಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅವರ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಪೋಸ್ಟರ್ ಜತೆಗೆ, ಯಾವ ಪೋಸ್ಟರ್ ಎಲ್ಲಿ ಪ್ರದರ್ಶನ ಕಾಣಲಿದೆ, ಆ ಪೋಸ್ಟರ್ ಅನ್ನು ಯಾರು ಮಾಡಿದ್ದು ಎಂಬ ಮಾಹಿತಿಯನ್ನೂ ಒಳಗೊಂಡಿದೆ. ಸದ್ಯಕ್ಕೆ, ಆಯ್ಕೆಯಾದ 5 ಪೋಸ್ಟರ್ಗಳನ್ನು ಕರ್ನಾಟಕದ ಅಭಿಮಾನಿ ಸಚಿನ್ ಕುಮಾರ್, ಮಹಾರಾಷ್ಟ್ರದ ಪರಿವರ್ತನ್, ಕರ್ನಾಟಕದ ಅಭಿಮಾನಿ ಜಾನ್ ಪೌಲ್ ಗ್ಸಾವಿಯರ್, ಕರ್ನಾಟಕದ ಅಭಿಮಾನಿ ಅಭಿಜಿತ್ ಶೆಟ್ಟಿ, ತಮಿಳುನಾಡಿನ ಬಾಲಾಜಿ ಮೂರ್ತಿ ಎಂಬುವವರು ಮಾಡಿದ್ದಾರೆ.