ಅಂದಹಾಗೆ, ಹಲವು ಮೂಲಗಳ ಪ್ರಕಾರ 'ಗಂಧದ ಗುಡಿ' ಸಿನಿಮಾ ಮುಂಬರುವ ಮೇ ತಿಂಗಳ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಹೌದು, ಅಪ್ಪು ಅವರು ಬಹಳ ಆಸೆಯಿಂದ, ಇಷ್ಟ ಪಟ್ಟು ನಿಷ್ಠೆಯಿಂದ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅವರ ಕನಸಿನ ಕೂಸನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಮುನ್ನವೇ ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಅಪ್ಪು ಅವರ ಈ ಕನಸಿಗೆ ಸಾಥ್ ನೀಡಿದವರೇ ನಿರ್ದೇಶಕ ಅಮೋಘ ವರ್ಷ. ಇನ್ನು, ಪುನೀತ್ ನಿಧನದ ಬಳಿಕ ನಿರ್ದೇಶಕ ಅಮೋಘ ವರ್ಷ ಅವರು 'ಗಂಧದ ಗುಡಿ'ಯ ಕೆಲಸವನ್ನು ನಿಲ್ಲಿಸಲಿಲ್ಲ. ಹಾಗೂ, ಪುನೀತ್ ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್ಕೆ ಪ್ರೊಡಕ್ಷನ್ ಮೂಲಕ ಅಪ್ಪು ಕನಸು ಸಾಕಾರಗೊಳಿಸಲು ನಿರ್ದೇಶಕ ಅಮೋಘ ವರ್ಷ ಅವರಿಗೆ ಸಹಾಯ ಮಾಡಿದ್ದಾರೆ.