

ರಣಬೀರ್ ಕಪೂರ್, ಸಂಜಯ್ ದತ್ ನಟಿಸಿರುವ ಆಕ್ಷನ್ ಚಿತ್ರ ‘ಶಮ್ಶೇರಾ’. ಕೆಲ ದಿನಗಳ ಹಿಂದಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯ ಅದರದೇ ವಿವಾದಗಳ ಸದ್ದು ಜೋರಾಗಿದೆ. ಹೌದು, ಕರಣ್ ಮಲ್ಹೋತ್ರಾ ನಿರ್ದೇಶನದ ‘ಶಮ್ಶೇರಾ’ ಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಸನ್ನಿವೇಶಗಳಿವೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ನಟ ಸಂಜಯ್ ದತ್ ನಟಿಸಿರುವ ಶುದ್ಧ ಸಿಂಗ್ ಎಂಬ ಪೊಲೀಸ್ ಅಧಿಕಾರಿ ಪಾತ್ರವನ್ನು ಖಳನಟನಂತೆ ಚಿತ್ರಿಸಲಾಗಿದೆ. ಆತ ಉದ್ದ ಜಡೆ ಬಿಟ್ಟು, ಹಣೆಯ ತುಂಬ ವಿಭೂತಿ ಹಾಗೂ ಕುಂಕುಮದ ತಿಲಕ ಧರಿಸಿದ್ದು, ಅದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಖಳನಾಯಕನ ಪಾತ್ರಕ್ಕೆ ತ್ರಿಪುಂಡ ತಿಲಕ ಯಾಕೆ ಬೇಕು? ಬಾಲಿವುಡ್ನಲ್ಲಿ ಹಿಂದೂಗಳು ಹಾಗೂ ಸನಾತನ ಧರ್ಮವನ್ನು ಮೊದಲಿನಿಂದಲೂ ಇದೇ ರೀತಿ ಅವಹೇಳನಕಾರಿಯಾಗಿ ತೋರಿಸಲಾಗುತ್ತಿದೆ. ಬಾಯ್ಕಾಟ್ ಬಾಲಿವುಡ್, ಬಾಯ್ಕಾಟ್ ಶಮ್ಶೇರಾ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ನಡೆಯುತ್ತಿದೆ. -ಏಜೆನ್ಸೀಸ್