ಅಭಿಷೇಕ್​ ಬಚ್ಚನ್​ ಆಸ್ಪತ್ರೆಯಲ್ಲಿ ಏನ್​ ಮಾಡ್ತಿದ್ದಾರೆ ನೋಡಿ ...

Abhishek Bachchan - Final
Published on

ಅಭಿಷೇಕ್​ ಬಚ್ಚನ್​ಗೆ ಏಕಾಂತ ಹೊಸದಲ್ಲ. ಕೆಲಸವಿಲ್ಲದೆ ಹಲವು ದಿನಗಳ ಕಾಲ ಸುಮ್ಮನೆ ಕೂತ್ತಿದ್ದಿದೆ ಎಂದು ಅವರೇ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೆಲಸವಿಲ್ಲದಿದ್ದರೂ, ಮನೆಯವರೆಲ್ಲಾ ಜತೆಗಿರುತ್ತಿದ್ದರು.

ಆದರೆ, ಈಗ ಹಾಗಿಲ್ಲ. ಅಭಿಷೇಕ್​ ಜುಲೈ 11ರಿಂದ ಅಕ್ಷರಶಃ ಒಬ್ಬಂಟಿಯಾಗಿದ್ದಾರೆ. ಕರೊನಾ ಪಾಸಿಟಿವ್​ ವರದಿ ಬಂದ ಹಿನ್ನೆಲೆಯಲ್ಲಿ ಜುಲೈ 11ರಂದು ಅಮಿತಾಭ್​ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆ ವಾರ್ಡ್​ನಲ್ಲಿ ಅವರೊಬ್ಬರಿಗೇ ಕೂತು ಬೋರ್​ ಆಗುವುದಿಲ್ಲವಾ ಎಂಬ ಪ್ರಶ್ನೆ ಬರಬಹುದು. ಎಷ್ಟು ಹೊತ್ತು ಮೊಬೈಲ್​ ಅಥವಾ ಟಿವಿ ನೋಡಬಹುದು ಅಥವಾ ಎಷ್ಟು ಹೊತ್ತು ತಾನೇ ಓದೋಕೆ ಸಾಧ್ಯ ಎಂಬ ಪ್ರಶ್ನೆ ಬಹಳ ಸಹಜವೇ. ಅಭಿಷೇಕ್​ಗೆ ಸಹ ಈ ಸಮಸ್ಯೆ ಕಾದಿದ್ದಿದೆ. ಇದರಿಂದ ಆಚೆ ಬರುವುದಕ್ಕೆ ಅವರು ಕಂಡುಕೊಂಡಿರುವ ಉಪಾಯ ಏನು ಗೊತ್ತಾ? ಫೋಟೋಗಳನ್ನು ತೆಗೆದಯುವುದು.

ನಾನಾವತಿ ಆಸ್ಪತ್ರೆಯಲ್ಲಿದ್ದುಕೊಂಡೇ ಅಭಿಷೇಕ್​ ಫೋಟೋಗ್ರಫಿ ಮಾಡುತ್ತಿದ್ದಾರೆ. ಸುತ್ತಮುತ್ತಲ ಪರಿಸರವನ್ನು ದಿನದ ವಿವಿಧ ಸಮಯದಲ್ಲಿ ಕ್ಲಿಕ್​ ಮಾಡುತ್ತಿದ್ದಾರೆ. ಅದನ್ನೆಲ್ಲಾ ಅವರು ಇನ್​ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

ಇನ್ನು ಗುರುವಾರ ಮಧ್ಯರಾತ್ರಿ, ಅವರು ಆಸ್ಪತ್ರೆಯ ಕಾರಿಡಾರ್​ನ ಫೋಟೋ ತೆಗೆದು ಪೋಸ್ಟ್​ ಮಾಡಿದ್ದಾರೆ. ಟನಲ್​ನ ಕೊನೆಯಲ್ಲಿ ಬೆಳಕು ಎಂಬ ಕ್ಯಾಪ್ಶನ್​ ನೀಡಿದ್ದಾರೆ. ಈ ಮೂಲಕ, ತಾವು ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸೂಚನೆಯನ್ನು ನೀಡಿದ್ದಾರೆ. ಇದಕ್ಕೆ ಅವರ ಸಹೋದರಿ ಶ್ವೇತಾ, 'ಆದಷ್ಟು ಬೇಗ ಬಾ' ಎಂದು ಹೇಳಿದ್ದಾರೆ.

ಈಗಾಗಲೇ ಅಭಿಷೇಕ್​ ಬಚ್ಚನ್​ ಇಬ್ಬರೂ ಆಸ್ಪತ್ರೆಗೆ ದಾಖಲಾಗಿ 20 ದಿನಗಳ ಮೇಲಾಗಿದೆ. ಅವರು ಅಡ್ಮಿಟ್ ಆದ ನಂತರ ಪತ್ನಿ ಐಶ್ವರ್ಯಾ ರೇ ಮತ್ತು ಪುತ್ರಿ ಆರಾಧ್ಯಾ ಆಸ್ಪತ್ರೆಗೆ ದಾಖಲಾಗಿ, ಬಿಡುಗಡೆಯೂ ಆಗಿದ್ದಾರೆ. ಅಭಿಷೇಕ್​ ಮತ್ತು ಅಮಿತಾಭ್​ ಬಚ್ಚನ್​ ಇಬ್ಬರೂ ಆಸ್ಪತ್ರೆಯಿಂದ ಯಾವಾಗ ಡಿಸ್ಚಾರ್ಜ್​ ಆಗಿ ಹೊರಬರುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net