ದೀಪಾವಳಿಗೆ ಹೆಡ್-ಬುಷ್; ಅ. 21ಕ್ಕೆ ಡಾನ್ ಕಥೆ ತೆರೆಯ ಮೇಲೆ..

Head Bush
Published on

ಧನಂಜಯ್ ಅಭಿನಯದ ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ. ಪಟ್ಟಿಯಲ್ಲಿ ಮೊದಲಿರುವುದು ‘ತೋತಾಪುರಿ’. ಈಗಾಗಲೇ ‘ಮಾನ್ಸೂನ್ ರಾಗ’ ಮತ್ತು ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳ ಬಿಡುಗಡೆ ದಿನಾಂಕಗಳೂ ಘೋಷಣೆಯಾಗಿವೆ. ಈ ಎರಡೂ ಚಿತ್ರಗಳು ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಲಿವೆ. ನವೆಂಬರ್ 1ಕ್ಕೆ ‘ಹೊಯ್ಸಳ’ ಬರಲಿದೆ ಎಂದು ಈಗಾಗಲೇ ಹೇಳಲಾಗಿದೆ. ಈ ಮಧ್ಯೆ, ಅಕ್ಟೋಬರ್​ನಲ್ಲೂ ಒಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಧನಂಜಯ್ ಮುಂದಾಗಿದ್ದಾರೆ. ಅದೇ ಶೂನ್ಯ ನಿರ್ದೇಶನದ ‘ಹೆಡ್ ಬುಷ್’.

ಬೆಂಗಳೂರಿನ ಡಾನ್ ಎಂ.ಪಿ. ಜಯರಾಜ್ ಕುರಿತ ‘ಹೆಡ್ ಬುಷ್’ ಚಿತ್ರೀಕರಣ ಒಂದು ತಿಂಗಳ ಹಿಂದೆಯೇ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಪ್ರಾರಂಭವಾಗಿತ್ತು. ಈಗ ಈ ಚಿತ್ರವನ್ನು ದೀಪಾವಳಿ ಪ್ರಯುಕ್ತ ಅ. 21ರಂದು ಬಿಡು ಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ ಧನಂಜಯ್. ಒಟ್ಟಿಗೆ ನಾಲ್ಕೈದು ದಿನಗಳ ಕಾಲ ಸತತವಾಗಿ ರಜಾದಿನಗಳು ಬರುವುದರಿಂದ, ಈ ಸಮಯದಲ್ಲೇ ಚಿತ್ರದ ಬಿಡುಗಡೆಯನ್ನು ಘೋಷಿಸಿದ್ದಾರೆ.

‘ಹೆಡ್-ಬುಷ್’ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡರೆ, ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. ಮಿಕ್ಕಂತೆ ಶ್ರುತಿ ಹರಿಹರನ್, ‘ಲೂಸ್ ಮಾದ’ ಯೋಗಿ, ರವಿಚಂದ್ರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ‘ಅಗ್ನಿ’ ಶ್ರೀಧರ್ ಕಥೆ-ಚಿತ್ರಕಥೆ ಬರೆದಿದ್ದಾರೆ. ಅಂದಹಾಗೆ, ನ.01ಕ್ಕೆ ಬಿಡುಗಡೆಯಾಗಬೇಕಿದ್ದ ‘ಹೊಯ್ಸಳ’ ಮುಂದಕ್ಕೆ ಹೋಗಿದೆ ಎಂದು ಸ್ವತಃ ಧನಂಜಯ್ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net