ಒಂದು ಹಾಡು, ಮತ್ತೊಂದು ಸಿನಿಮಾ ; ಫ್ರೀಡಮ್​ ಹಾಡಿನ ಜತೆ "ಥಗ್ಸ್​ ಆಫ್​ 1980' ಟೈಟಲ್​ ಲಾಂಚ್​

Freedom_(126)
Published on

ಬೆಂಗಳೂರು:
ದೂರದ ದುಬೈನಲ್ಲಿ ನೆಲೆಸಿರುವ ಮೂಲತ@ ಮೈಸೂರಿನ ಗಾಯಕಿ ಈಶಾನಿ. 17 ಇಂಗ್ಲೀಷ್​ ಆಲ್ಬಂ ಹಾಡುಗಳ ಜತೆ ಎರಡು ಕನ್ನಡ ಆಲ್ಬಂ ಸಾಂಗ್​ ಹಾಡಿರುವ ಅವರು ಇತ್ತೀಚೆಗಷ್ಟೆ ಮೂರನೇ ಕನ್ನಡ ಆಲ್ಬಂ ಸಾಂಗ್​ ಬಿಡುಗಡೆ ಮಾಡಿದರು. ಈ ಹಿಂದೆ "ರೈಟರ್​' ಮತ್ತು "ಊರ್ಮಿಳ' ಹಾಡುಗಳಿಗೆ ಧ್ವನಿಯಾಗಿದ್ದ ಈಶಾನಿ, ಇದೀಗ "ಫ್ರೀಡಮ್​' ಸಾಂಗ್​ ಮೂಲಕ ಮತ್ತೆ ವಾಪಸ್ಸಾಗಿದ್ದಾರೆ.

"ನಾನು ಮೈಸೂರಿನವಳು, ದುಬೈನಲ್ಲಿ ನೆಲೆಸಿದ್ದೇನೆ. ಅಪ್ಪ, ಅಮ್ಮ ಇಬ್ಬರೂ ಕರ್ನಾಟಕದಲ್ಲೇ ಇದ್ದಾರೆ. ಅವರಿಗೆ ನಾನು ಕನ್ನಡದಲ್ಲಿ ಹಾಡಬೇಕು ಎಂಬ ಆಸೆಯಿತ್ತು. ನನಗೂ ಕನ್ನಡದಲ್ಲಿ ಹಾಡುವ ಬಯಕೆಯಿತ್ತು. ಅದರಂತೆ ಕನ್ನಡದಲ್ಲಿ ಆಲ್ಬಂ ಹಾಡುಗಳನ್ನು ಮಾಡಿದೆ. ಎಲ್ಲೆಡೆ ಉತ್ತಮ ರೆಸ್ಪಾನ್ಸ್​ ವ್ಯಕ್ತವಾಗುತ್ತಿದೆ. ಈಗ ಕನ್ನಡ ಚಿತ್ರಗಳಲ್ಲಿ ನಟಿಸಬೇಕು, ಹಾಡಬೇಕು ಅಂತ ಆಸೆಯಿದೆ. ಹೀಗಾಗಿ ಸಂಪೂರ್ಣ ಸಮಯವನ್ನು ಸಂಗೀತಕ್ಕಾಗಿ ಮೀಸಲಿಟ್ಟಿದ್ದೇನೆ' ಎಂದು ಹೇಳಿಕೊಂಡರು.

ವಾಸುಕಿ ವೈಭವ್​ ಈ ಹಾಡಿಗೆ ಸಾಹಿತ್ಯ ರಚಿಸಿ, ಸಂಗೀತ ನೀಡಿದ್ದಾರೆ. "ಫ್ರೀಡಂ' ಆಲ್ಬಂ ಹಾಡನ್ನು ನಿರ್ದೇಶಿಸಿರುವ ಗಿರಿ ಗೌಡ, ತಾವು ನಿರ್ದೇಶಿಸುತ್ತಿರುವ ಎರಡನೇ ಚಿತ್ರ "ಥಗ್ಸ್​ ಆ್​ 1980' ಶೀರ್ಷಿಕೆ ಅನಾವರಣ ಮಾಡಿದರು. "ಹಳ್ಳಿಯಲ್ಲಿ ನಡೆಯುವ ಸಮುದ್ರ ತೀರದ ಕಥೆಯಿದು' ಎಂದರು. ನಟ ವರ್ಧನ್​ ತೀರ್ಥಹಳ್ಳಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net