'ಫಾರ್​ಎವರ್​' ಎಂಬ ಹೆಸರಲ್ಲಿ ಹಾಡಾಗಿ ಬಂತು ತ್ರಿಕೋನ ಪ್ರೇಮಕಾವ್ಯ

Forever
Published on

ಬೆಂಗಳೂರು: ಕಾಲೇಜು ಜೀವನದಲ್ಲಿ ಪ್ರೀತಿ, ಪ್ರೇಮ ಸಾಮಾನ್ಯ. ಈ ಪ್ರೇಮಕಥೆಗಳೇ ಹಲವು ಚಿತ್ರಗಳಿಗೆ ಸರಕಾಗಿವೆ. ಈಗ ಇದೇ ವಿಷಯವನ್ನಿಟ್ಟುಕೊಂಡು ಒಂದು ವಿಡಿಯೋ ಹಾಡನ್ನು ಮಾಡಲಾಗಿದೆ. ಕಾಲೇಜ್​ವೊಂದರಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನಾಧರಿಸಿದ ಈ ಹಾಡಿಗೆ 'ಫಾರೆವರ್​' ಎಂಬ ಹೆಸರಿಡಲಾಗಿದೆ.

ಅಮೆರಿಕಾದಲ್ಲಿ ನೆಲೆಸಿರುವ ಆದರ್ಶ್ ಅಯ್ಯಂಗಾರ್, 'ಫಾರೆವರ್' ಹಾಡನ್ನು ನಿರ್ಮಿಸಿದ್ದಾರೆ. ಈ ತ್ರಿಕೋನ ಪ್ರೇಮಕಾವ್ಯವನ್ನು ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಆದರ್ಶ್ ಅಯ್ಯಂಗಾರ್, ಸಿರಿ ಪ್ರಹ್ಲಾದ್, ಸುಮನ್, ರಾಜ್, ದರ್ಶನ್ ಕುಮಾರ್ ಇದರಲ್ಲಿ ನಟಿಸಿದ್ದಾರೆ.

ಸಾಮಾನ್ಯವಾಗಿ ಹಲವು ಪ್ರೇಮಕಥೆಗಳಿಗೆ ಸಮಾಜದಿಂದ ಅಡೆತಡೆಗಳು ಎದುರಾಗುತ್ತವೆ. ಆದರೆ, ಈ ಪ್ರೇಮಕಥೆಯಲ್ಲಿ ವಿಧಿ ಹೇಗೆ ಆಟ ಆಡುತ್ತದೆ ಎಂದು ಹೇಳಲಾಗಿದೆಯಂತೆ. ಅದಕ್ಕೆ ಸರಿಯಾಗಿ ಈ ಹಾಡಿಗೆ, 'ಪ್ರೀತಿಯಂಬ ರಹದಾರಿಯಲ್ಲಿ ವಿಧಿಯೆಂಬ ಅನಿರೀಕ್ಷಿತ ನಿಲ್ದಾಣ' ಎಂಬ ಅಡಿಬರಹವಿದೆ. ಪ್ರೇಮಿಗಳ ಭಾವನೆ ಮತ್ತು ಪ್ರೀತಿಯ ನಿರೀಕ್ಷೆಯನ್ನು ಪ್ರೇಮಿಗಳಲ್ಲಿ ಸದಾ ಇರುವಂತೆ ಮಾಡುವುದು ಈ ಹಾಡಿನ ವಿಶೇಷ. ಈ ಹಾಡನ್ನು ಬರೆದಿರುವುದಷ್ಟೇ ಅಲ್ಲ, ಸಂಗೀತ ಸಂಯೋಜಿಸಿದ್ದಾರೆ ದರ್ಶನ್​ ಕುಮಾರ್​. ಇನ್ನು ಗುರುಪ್ರಸಾದ್​ ನರ್ನಾಡ್​ ಛಾಯಾಗ್ರಹಣ ಮಾಡಿದ್ದಾರೆ.

ಈ ಹಾಡನ್ನು ವೀಕ್ಷಿಸಿರುವನಟಿ ರುಕ್ಮಿಣಿ ವಸಂತ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net