ಸರಣಿ ಕೊಲೆಗಳ ಕುರಿತಾದ 'ಕಾಕ್​ಟೈಲ್​' ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ

Cocktail - Final
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಥ್ರಿಲ್ಲರ್​, ಮರ್ಡರ್​ ಮಿಸ್ಟ್ರಿ ಶೈಲಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿವೆ. ಆ ಸಾಲಿಗೆ ಈಗ 'ಕಾಕ್​ಟೈಲ್​' ಎಂಬ ಹೊಸ ಚಿತ್ರವೂ ಸೇರಿದೆ.

'ಕಾಕ್​ಟೈಲ್​', ಸೆಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಇರುವ ಚಿತ್ರವಾಗಿದ್ದು, ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಚಿತ್ರ ಸಾಗುತ್ತದಂತೆ. ಆದರೆ, ಕ್ಲೈಮಾಕ್ಸ್‌ದಲ್ಲಿ ಬೇರೆಯದೆ ವಿಷಯಗಳು ತೆರೆದುಕೊಳ್ಳುತ್ತವಂತೆ. ಒಟ್ಟಾರೆ, ಅನೇಕ ಅಂಶಗಳನ್ನು ಬೆರೆಸಿ ಕಾಕ್ಟೇಲ್ ಪಾನೀಯದ ರೀತಿಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವವನ್ನು ಈ ಚಿತ್ರದ ಮೂಲಕ ನೀಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.

ವಿಜಯಲಕ್ಷೀ ಕಂಬೈನ್ಸನಡಿ ಡಾ.ಶಿವಪ್ಪ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್​-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲದೆ. ಇತ್ತೀಚೆಗಷ್ಟೇ, ನಟ-ನಿರ್ದೇಶಕ 'ಜೋಗಿ' ಪ್ರೇಮ್​ ಅವರು ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಗಣೇಶನ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ಶ್ರೀರಾಮ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವೀರೇನ್ ಕೇಶವ್ ನಾಯಕ, ಚರಿಷ್ಮಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರೊಂದಿಗೆ ಶೋಭರಾಜ್, ರಮೇಶ್‌ ಪಂಡಿತ್, ಮಹಾಂತೇಶ್ ಹಿರೇಮಠ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು ಮುಂತಾದವರು ಅಭಿನಯಿಸಿದ್ದಾರೆ.

ಲೋಕಿತವಸ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳಿಗೆ ಅರ್ಮಾನ್‌ ಮಲ್ಲಿಕ್, ಅನುರಾಧ ಭಟ್ ಮುಂತಾದವರು ಧ್ವನಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net