ಡ್ರಾಮಾ ಕ್ವೀನ್​ ರಾಖಿ ಸಾವಂತ್​ ವಿರುದ್ಧ ಎಫ್​ಐಆರ್​ ದಾಖಲು!

Rakhi Sawanth
Published on

ಮುಂಬೈ: ಸದಾ ವಿವಾದದಿಂದಲೇ ಸುದ್ದಿಯಾಗುವ ನೃತ್ಯಗಾರ್ತಿ ರಾಖಿ ಸಾವಂತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಅವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬುಡಕಟ್ಟು ಸಮುದಾಯದ ವೇಷ ಭೂಷಣ ತೊಟ್ಟು ಅಪಹಾಸ್ಯ ಮಾಡಿದ್ದಾರೆ ಎಂದು ರಾಂಚಿಯಲ್ಲಿ ರಾಖಿ ವಿರುದ್ಧ ದೂರು ನೀಡಲಾಗಿದೆ.

ಅಜಯ್​ ಠಾಕ್ರೆ ಎಂಬುವರರು ರಾಖಿ ವಿರುದ್ಧ ದೂರು ನೀಡಿದ್ದು, ಬುಡಕಟ್ಟು ಸಮಯದಾದ ವೇಷಭೂಷಣವನ್ನು ಅರೆನಗ್ನ ರೀತಿಯಲ್ಲಿ ಹಾಕಿ, ನಮ್ಮ ಸಮುದಾಯದ ಮಹಿಳೆಯರನ್ನು ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ಇನ್ಸ್​ಸ್ಟಾಗ್ರಾಂನಲ್ಲಿ ಭಾರೀ ವೈರಲ್​ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net