ಉತ್ತರಾಖಂಡ: ಅಪ್ಪು ನಮನ್ನು ಅಗಲಿ 2 ತಿಂಗಳು ಕಳೆದಿವೆ. ಆದರೆ, 'ಜೊತೆಗಿರದ ಜೀವ ಎಂದಿಗಿಂತ ಜೀವಂತ' ಎಂಬಂತೆ ಪುನೀತ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಅಂತ ಎಲ್ಲರ ಮನದಲ್ಲಿ ಇಂದಿಗೂ ಜೀವಂತವಿದ್ದಾರೆ. ಇನ್ನು, ಅಪ್ಪು ಅಗಲಿಕೆಯ ನಂತರ ಹಲವರು ಅವರಿಗೆ ಬೇರೆ-ಬೇರೆ ವಿಶೇಷ ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಬೈಕ್ ರೈಡ್, ಸೈಕಲ್ ರೈಡ್, ಯಾತ್ರೆಗಳು ಎಂಬಂತೆ ಹಲವು ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಆದರೆ, ಇಲ್ಲೊಂದು ಅಪ್ಪು ಅಭಿಮಾನಿ ಬಳಗ ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದ್ದಾರೆ.