ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ತೆಲುಗು ಚಿತ್ರರಂಗದ ಸೆಲ್ಫ್ ಮೇಡ್ ಸ್ಟಾರ್‌ಗಳಲ್ಲಿ ಒಬ್ಬರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ಅವರು ಟಾಲಿವುಡ್‌ಗೆ 'ಅಷ್ಟಾಚೆಮ್ಮಾ' ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಇದೀಗ, ಬಹಳಷ್ಟು ವಿಭಿನ್ನ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಆದ ಖ್ಯಾತಿ ಗಳಿಸಿದ್ದಾರೆ. ನಾನಿ ನಾಯಕನಾಗಿ ನಟಿಸಿರುವ 'ಶ್ಯಾಮ್ ಸಿಂಘ ರಾಯ್' ಅವರ ಇತ್ತೀಚಿನ ಚಿತ್ರವಾಗಿದ್ದು, ಕ್ರಿಸ್ಮಸ್ ಬಿಡುಗಡೆಯಾಯಿತು. ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಬಂದರೂ, ಕಲೆಕ್ಷನ್ ಕಡಿಮೆ ಎಂದು ಹೇಳಲಾಗುತ್ತಿದೆ. ಹೌದು, ಚಿತ್ರ ತೆಲುಗಿನ ಉಭಯ ರಾಜ್ಯಗಳಲ್ಲಿ ಕೇವಲ 22 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ.