ಪನೀರ್​ನಲ್ಲೂ ಮಿಂಚಿದ 'ಗಂಗೂಬಾಯಿ ಕಥಿಯಾವಾಡಿ'! ವಿಡಿಯೋ ವೈರಲ್...

Published on
ಬಾಲಿವುಡ್ ನಟಿ ಆಲಿಯಾ ಭಟ್ ಅವರ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಇಡೀ ದೇಶದಲ್ಲಿ ಭಾರೀ ಸದ್ದು, ಸುದ್ದಿ ಮಾಡಿದೆ, ಮಾಡುತ್ತಿದೆ. ಇನ್ನು, ಈ ಚಿತ್ರದಲ್ಲಿ ಗುಳಿ ಕೆನ್ನೆ ಸುಂದರಿ ಆಲಿಯಾ ಭಟ್ ಅವರ ನಟನೆ ನೋಡಿದ ಸಿನಿರಂಗದ ಬೇರೆ ನಿರ್ದೇಶಕರು ನಟಿಯ ಮೇಲೆ ಅವಕಾಶಗಳ ಸುರಿ ಮಳೆಯನ್ನೆ ಸುರಿಸುತ್ತಿದ್ದಾರೆ. ಜತೆಗೆ, ಸಿನಿಮಾ ನೋಡಿದ ಸಿನಿಪ್ರೇಕ್ಷಕರು, ಆಲಿಯಾ ಅವರ ಅಪ್ಪಟ ಅಭಿಮನಿಗಳಂತೂ ಅವರ ನಟನೆಗೆ ದಿಲ್ ಖುಷ್ ಆಗಿ, ಫಿದಾ ಆಗಿದ್ದಾರೆ. ಹೀಗೆ, ಸಿನಿಮಾ ನೋಡಿ ಆಲಿಯಾ ಅವರಿಗೆ ಫಿದಾ ಆಗಿರುವ ಕಲಾವಿದ ಪ್ರಫುಲ್ ಅವರ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಪಾತ್ರದ ಗಂಗೂಬಾಯಿಯ ಒಂದು ನೋಟವನ್ನು, ಒಂದು ದೊಡ್ಡ ಪನೀರ್ ಬ್ಲಾಕ್ ಮೇಲೆ ಕೆತ್ತಿದ್ದಾರೆ.
ಪ್ರಫುಲ್ ಜೈನ್ ಇನ್‌ಸ್ಟಾಗ್ರಾಂನಲ್ಲಿ ಅವರ ಕೆತ್ತನೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಫೆಬ್ರವರಿ 26 ರಂದು ಪ್ರಫುಲ್ ಅಪ್​ಲೋಡ್ ಮಾಡಿದ್ದು, ಕಳೆದ ಎರಡು ದಿನಗಳಿಂದ ವಿಡಿಯೋ ವೈರಲ್ ಆಗತೊಡಗಿದೆ. ಅಂದಹಾಗೆ, ಪನೀರ್ ಬ್ಲಾಕ್‌ ಮೇಲೆ ಚಿಕ್ಕ, ಚೂಪಾದ ಚಾಕುವಿನಿಂದ ಹಾಗೂ ಡಾರ್ಕ್ ಸೋಯಾ ಸಾಸ್ ಬಳಸಿ ಆಲಿಯಾ ಅವರ ಲುಕ್​ವೊಂದನ್ನು ಕೆತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಸದ್ಯ, ಪ್ರಫುಲ್ ಅವರ ಕಲೆಯನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದು, ಅವರ ವಿಡಿಯೋಗೆ ಬರೋಬ್ಬರಿ 73,000 ಲೈಕ್ಸ್ ಮತ್ತು ಲಕ್ಷ ಲಕ್ಷ ವೀಕ್ಷಣೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net