ತೆಲುಗಿನಲ್ಲಿ ಹೊಸ ದಾಖಲೆ ಬರೆದ ಅಲ್ಲು ಅರ್ಜುನ್, ಪೂಜಾ ಹೆಗ್ಡೆ

76905946
Published on

ಹೈದರಾಬಾದ್: ಟಾಲಿವುಡ್​ ಚಿತ್ರರಂಗದಲ್ಲಿ ಈ ವರೆಗೂ ಯಾರೂ ಮಾಡದ ದಾಖಲೆಯೊಂದನ್ನು ಅಲ್ಲು ಅರ್ಜುನ್​ ಮಾಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದ್ದ ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟ ಬೊಮ್ಮ ಹಾಡೀಗ ಹೊಸ ಮೈಲಿಗಲ್ಲು ಮುಟ್ಟಿದೆ.

ಅಂದರೆ, ಈವರೆಗೂ ಒಟ್ಟು 450 ಮಿಲಿಯನ್ ಬಾರಿ ವೀಕ್ಷಣೆ ಪಡೆದಿರುವ ಈ ಸಿನಿಮಾ, 3 ಮಿಲಿಯನ್​ಗೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡ ಮೊದಲ ತೆಲುಗು ಸಿನಿಮಾ ಎಂಬ ಖ್ಯಾತಿ ಪಡೆದುಕೊಂಡಿದೆ.

ಅಲ್ಲು ಅರ್ಜುನ್​ ಮತ್ತು ಪೂಜಾ ಹೆಗ್ಡೆ ನೃತ್ಯ ಮಾಡಿರುವ ಈ ಹಾಡು ಕೇವಲ ದಕ್ಷಿಣ ಭಾರತದವರಿಗಷ್ಟೇ ಅಲ್ಲ ಉತ್ತರ ಭಾರತದ ಮಂದಿಯನ್ನೂ ಸೆಳೆದಿದೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ ಸಹ ಈ ಹಾಡಿಗೆ ಕುಟುಂಬ ಸಮೇತ ಹೆಜ್ಜೆ ಹಾಕಿದ್ದಾರೆ.

ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾಕ್ಕೆ ತಮನ್​ ಸಂಗೀತ ಸಂಯೋಜನೆ ಮಾಡಿದ್ದರು. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಒದಗಿಸಿದ್ದರು. ಇತ್ತೀಚೆಗಷ್ಟೇ ತಮಿಳಿನ ರೌಡಿ ಬೇಬಿ ಹಾಡು ಯೂಟ್ಯೂಬ್​ನಲ್ಲಿ 1ಬಿಲಿಯನ್​ ವೀಕ್ಷಣೆ ಪಡೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net