ಪಠಾಣ್ ಸೆಟ್​ನಲ್ಲಿ ಶಾರುಖ್​; ಏಜೆಂಟ್​ ಪಾತ್ರದಲ್ಲಿ ದೀಪಿಕಾ

123
Published on

ಮುಂಬೈ: ಜೀರೋ ಸಿನಿಮಾ ಸೋಲಿನ ಬಳಿಕ ಬೇರಾವ ಸಿನಿಮಾ ಆಯ್ದುಕೊಳ್ಳದ ಶಾರುಖ್​, ಇದೀಗ ಸುದೀರ್ಘ ಎರಡು ವರ್ಷದ ಬಳಿಕ ಪಠಾಣ್​ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಸಾಲು ಸಾಲು ಸೋಲು ಕಂಡು, ಅದರಿಂದ ಕೊಂಚ ಬೇಸರಗೊಂಡಿದ್ದ ಶಾರುಖ್​, ಇದೀಗ ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ. ಇನ್ನೇನು ಶೂಟಿಂಗ್​ ಸಹ ಶುರುವಾಗಲಿದ್ದು, ಜನವರಿ ವೇಳೆಗೆ ದೀಪಿಕಾ, ಪಠಾಣ್​ ತಂಡ ಸೇರಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಅವರ ಪಾತ್ರದ ಗುಟ್ಟೂ ರಟ್ಟಾಗಿದೆ.

ಹೌದು, ಪಠಾಣ್​ ಸಿನಿಮಾದಲ್ಲಿ ಏಜೆಂಟ್​ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್​ ಸಿನಿಮಾ ಆಗಿರುವುದರಿಂದ ಆ್ಯಕ್ಷನ್ ಅವತಾರದಲ್ಲಿಯೇ ದೀಪಿಕಾ ಸಹ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಶಕುನ್ ಬಾತ್ರಾ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದು, ಇನ್ನೇನು ಜನವರಿ ವೇಳೆಗೆ ಶೂಟಿಂಗ್​ಗೆ ಹಾಜರಾಗಲಿದ್ದಾರೆ.

ಇತ್ತ ಶಾರುಖ್​ ಖಾನ್ ಎರಡು ವರ್ಷಗಳ ಬಳಿಕ ಮತ್ತೆ ಸಿನಿಮಾ ಸೆಟ್​ನತ್ತ ಮರಳಿದ್ದು, ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ವಾರ್ ಸಿನಿಮಾ ಖ್ಯಾತಿಯ ಸಿದ್ಧಾರ್ಥ್​​ ಆನಂದ್​ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್​ ಹೇಳಲಿದ್ದು, ಜಾನ್​ ಅಬ್ರಹಂ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ. 2021ರ ದೀಪಾವಳಿಗೆ ಚಿತ್ರ ಬಿಡುಗಡೆ ಮಾಡುವುದು ತಂಡದ ಪ್ಲ್ಯಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net