ನಡುರಸ್ತೆಯಲ್ಲಿ ಅರೆಸ್ಟ್​ ಆದ ರಕ್ತಸಿಕ್ತ ಭೀಮ ; ದುನಿಯಾ ವಿಜಯ್​ ಚಿತ್ರದ ಶೂಟಿಂಗ್​ ಕಂಪ್ಲೀಟ್​

1234
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಸಲಗ’ ಸಕ್ಸಸ್ ಬಳಿಕ ನಟ, ನಿರ್ದೇಶಕ ದುನಿಯಾ ವಿಜಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ಮತ್ತೊಂದು ಕಲ್ಟ್ ಸಿನಿಮಾ ‘ಭೀಮ’. ನಿರ್ದೇಶನದ ಜತೆಗೆ ವಿಜಯ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ರಂಗಭೂಮಿ ಪ್ರತಿಭೆ ಅಶ್ವಿನಿ ಅಂಬರೀಷ್ ನಾಯಕಿಯಾಗಿದ್ದಾರೆ. ಮಂಗಳವಾರ (ಡಿ. 19) ಮಧ್ಯರಾತ್ರಿ ‘ಭೀಮ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಇಡೀ ತಾರಾಗಣದ ಜತೆ ಕೊನೆಯ ಸನ್ನಿವೇಶದ ಚಿತ್ರೀಕರಣ ಮಾಡುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ.

ಈಗಾಗಲೇ ಚರಣ್ ರಾಜ್ ಸಂಗೀತದಲ್ಲಿ ವಿಭಿನ್ನ ಶೈಲಿಯಲ್ಲಿರುವ ‘ಬ್ಯಾಡ್ ಬಾಯ್ಸ’ ಮತ್ತು ‘ಐ ಲವ್ ಯೂ ಕಣೇ’ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರಕ್ಕೆ ಶಿವಸೇನ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.

ದುನಿಯಾ ವಿಜಯ್, ಅಶ್ವಿನಿ ಜತೆ ಪ್ರಿಯಾ ಶಠಮರ್ಷಣ, ಬ್ಲ್ಯಾಕ್ ಡ್ರಾೃಗನ್ ಮಂಜು, ಗಿಲಿಗಿಲಿ ಚಂದ್ರು, ಕಲ್ಯಾಣಿ ರಾಜು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರೀಕರಣದ ಜತೆ ಜತೆಗೆ ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ ಇನ್ನು ಕೆಲವೇ ದಿನಗಳಲ್ಲಿ ‘ಭೀಮ’ ತೆರೆಗೆ ಬರಲು ರೆಡಿಯಾಗಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net