

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ‘ಭೀಮ’ ಚಿತ್ರದ ಎರಡನೇ ಹಾಡು ಗುರುವಾರ (ಡಿ.7) ಬಿಡುಗಡೆಯಾಗಿದೆ. ‘ಸಲಗ’ ಯಶಸ್ಸಿನ ಬಳಿಕ ದುನಿಯಾ ವಿಜಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ಕಲ್ಟ್ ಸಿನಿಮಾ ‘ಭೀಮ’. ಈ ಹಿಂದೆ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರದ ಮೊದಲ ಹಾಡು ‘ಬ್ಯಾಡ್ ಬಾಯ್ಸ’ ರಿಲೀಸ್ ಮಾಡಲಾಗಿತ್ತು. ಇದೀಗ ಚಿತ್ರತಂಡ ಪ್ರೀತಿಯ ಹಾಡನ್ನು ರಿಲೀಸ್ ಮಾಡಿದೆ.
‘ಐ ಲವ್ ಯೂ ಕಣೆ’ ಎಂದು ಸಾಗುವ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿ ಹಾಡಿದ್ದಾರೆ. ಹಾಡಿಗೆ ಚರಣ್ ರಾಜ್ ಜತೆ ವೈಷ್ ಧ್ವನಿಯಾಗಿದ್ದಾರೆ. ಶಾಸೀಯ ಮತ್ತು ಪಾಶ್ಚಾತ್ಯ ಸಂಗೀತದ ಸಮ್ಮಿಲನದಲ್ಲಿ ಮೂಡಿಬಂದಿರುವ ವಿಭಿನ್ನ ಶೈಲಿಯ ಪ್ರೇಮ ಗೀತೆ ಇದಾಗಿದೆ. ಇನ್ನು ‘ಭೀಮ’ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ.
ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣವಿರಲಿದೆ. ಚಿತ್ರದಲ್ಲಿ ದುನಿಯಾ ವಿಜಯ್‌ಗೆ ರಂಗಭೂಮಿ ಹುಡುಗಿ ಅಶ್ವಿನಿ ನಾಯಕಿಯಾಗಿದ್ದು, ಪ್ರಿಯಾ ಶಠಮರ್ಷಣ, ಕಾಕ್ರೋಚ್ ಸುಧಿ, ಬ್ಲ್ಯಾಕ್ ಡ್ರಾೃಗನ್ ಮಂಜು, ಕಲ್ಯಾಣಿ, ಗಿಲಿಗಿಲಿ ಚಂದ್ರು ಪ್ರಮುಖ ತಾರಾಗಣದಲ್ಲಿದ್ದಾರೆ.