

ಕಿರುತೆರೆ ನಟಿ ಜ್ಯೋತಿ ರೈ ಇತ್ತೀಚೆಗೆ ತಮ್ಮ ಹಾಟ್ ಫೋಟೋಗಳನ್ನ ಹೆಚ್ಚಾಗಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರ್ತಾರೆ. ಆದ್ರೆ ವಿಚಾರ ಅದಲ್ಲ ಜ್ಯೋತಿ ರೈ ಹಂಚಿಕೊಳ್ಳವ ಪ್ರತಿಯೊಂದು ಫೋಟೋಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಈ ಹಿಂದೆ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸುಂದರಿ ಆಗಾಗ ಹಾಟ್ ಫೋಟೋಸ್ ಮೂಲಕ ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಜ್ಯೋತಿ ಇತ್ತೀಚಿನ ಫೋಟೋಸ್ ಇಲ್ಲಿವೆ ನೋಡಿ. ದಕ್ಷಿಣ ಕನ್ನಡದ ಪತ್ತೂರಿನವರಾದ ಜ್ಯೋತಿ ರೈಗೆ 20ರ ವಯಸ್ಸಲ್ಲೇ ಮದುವೆಯಾಗಿತ್ತು.
ಶಾರ್ಟ್ ಡ್ರೆಸ್, ಟಾಪ್, ಫ್ರಾಕ್‌ಗಳಲ್ಲಿ ಫೋಸ್ ನೀಡುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಅವುಗಳಿಗೆ ಯಾರು ಕಾಮೆಂಟ್ ಮಾಡಲಾಗದಂತೆ ಕಾಮೆಂಟ್ ಸೆಕ್ಷನ್ ಆಫ್ ಮಾಡುತ್ತಾರೆ.
ಜ್ಯೋತಿ ರೈ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಅಷ್ಟೇ ಅಲ್ಲ ಜ್ಯೋತಿ ರೈ ವಯಸ್ಸಾಗುತ್ತಿರುವಂತೆ ಮತ್ತಷ್ಟು ಸುಂದರವಾಗುತ್ತಿದ್ದಾರೆ.
ಜೋಗುಳ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡ ಜ್ಯೋತಿ ಸಧ್ಯ ತೆಲುಗು ಸಿನಿರಂಗದಲ್ಲಿ ಆಕ್ಟಿವ್ ಆಗಿದ್ದಾರೆ. 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ಕನ್ನಡ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.
ಜ್ಯೋತಿ ರೈ ಹೆಸರು ಕಳೆದ ಕೆಲವು ಸಮಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸುತ್ತಿದ್ದ ಜ್ಯೋತಿ ರೈ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಲುಕ್‌ನಿಂದಾನೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.