ಹೀಗಾಗಿ, ಆನಂದ್ ಆಡಿಯೋ ಸಂಸ್ಥೆ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ್ದು, ಅವರು ಅಡ್ವಾನ್ಸ್ ಚೆಕ್ ಹಾಗೂ ಅಗ್ರಿಮೆಂಟ್ ಅನ್ನು 'ಭೀಮ' ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಅವರಿಗೆ ನೀಡಿದ್ದಾರೆ. ಸದ್ಯ, ನಟ ದುನಿಯಾ ವಿಜಯ್ ಅವರು ತೆಲುಗಿನ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಕಾರಣ, 'ಭೀಮ' ಚಿತ್ರದ ಮುಹೂರ್ತಕ್ಕೆ ಇನ್ನೂ ಸಿದ್ಧತೆಗಳು ನಡೆಯುತ್ತಿವೆ. ಇದರಿಂದ, ಏಪ್ರಿಲ್ 18 ರಂದು ಸಿನಿಮಾದ ಮುಹೂರ್ತ ಅದ್ದೂರಿಯಾಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ನಟ ದುನಿಯಾ ವಿಜಯ್ ಅವರ ಇಷ್ಟ ದೇವತೆ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ 'ಸಲಗ' ಚಿತ್ರದ ಮುಹೂರ್ತ ನಡೆದಿದ್ದು, 'ಭೀಮ'ದ ಮುಹೂರ್ತ ಕೂಡಾ ಅಲ್ಲಿಯೇ ನಡೆಯಲಿದೆ ಎನ್ನಲಾಗಿದೆ.