ಈ ಹೆಸರಿಡದ ಚಿತ್ರವು ತೆಲುಗಿನಲ್ಲಿ ನಟ ದುನಿಯಾ ವಿಜಯ್ ಅವರ ಚೊಚ್ಚಲ ಸಿನಿಮಾ ಆಗಲಿದೆ. ನಟ ದುನಿಯಾ ವಿಜಯ್ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವನ್ನು 'ಮೈತ್ರಿ ಮೂವೀ ಮೇಕರ್ಸ್' ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಒಂದು ಮಾಸ್, ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಂತೆ. ನಟ ಬಾಲಕೃಷ್ಣ ಅವರಿಗೆ ನಾಯಕಿಯಾಗಿ ನಟಿ ಶ್ರುತಿ ಹಾಸನ್ ಆಯ್ಕೆಯಾಗಿದ್ದಾರೆ. ತಾತ್ಕಾಲಿಕವಾಗಿ '#NBK107' ಎಂಬ ಹೆಸರನ್ನು ಈ ಚಿತ್ರಕ್ಕೆ ನೀಡಲಾಗಿದೆ. ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ NBK107 ಚಿತ್ರವನ್ನು ನಿರ್ಮಿಸುತ್ತಿದ್ದು, ಎಸ್.ಎಸ್.ಥಮನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.