ಇನ್ನು, ರಚಿತಾ ಅವರ ''ಲವ್ ಯೂ ರಚ್ಚು'' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ರಚಿತಾ ರಾಮ್ ಮೋಹಕ ತಾರೆಯ ಬಗ್ಗೆ ಭಾವುಕರಾಗಿ ಮಾತಾಡಿದ್ದರು. ''ಲವ್ ಯೂ ರಚ್ಚು'' ಸಿನಿಮಾದ ಟೈಟಲ್ ಮೊದಲು ''ಲವ್ ಯೂ ರಮ್ಯಾ'' ಎಂದು ಇಡಬೇಕಿತ್ತಂತೆ ಚಿತ್ರತಂಡ. ಅದರ ಬಗ್ಗೆ ರಚಿತಾ ಅವರನ್ನು ಕೇಳಿದಾಗ, ''ಅಯ್ಯೋ, ರಮ್ಯಾ ಅವರ ಹೆಸರಿಟ್ಟರೂ, ನಾನು ತುಂಬಾ ಖುಷಿಯಿಂದ ನಟಿಸುತ್ತಿದ್ದೆ. ಅದಕ್ಕಿಂತ ಭಾಗ್ಯವೇ? ಚಿತ್ರದಲ್ಲಿ ನನ್ನ ಹೆಸರು ರಚ್ಚು ಬದಲು ರಮ್ಯಾ ಆಗುತ್ತಿತು. ಅಷ್ಟೇ. ನಾನು ಅಂದು ಮತ್ತು ಇಂದು ರಮ್ಯಾ ಅವರ ದೊಡ್ಡ ಅಭಿಮಾನಿ'' ಎಂದು ಉತ್ತರಿಸಿದರು ರಚಿತಾ. ಇಷ್ಟಕ್ಕೇ ಮುಗಿಯದ ಮಾತು, ರಚಿತಾ ಅವರು ರಮ್ಯಾಗೆ ಒಂದು ಬೇಡಿಕೆ ಇಟ್ಟಿದ್ದರು.