ಆದ್ರೀಗ, ತಮ್ಮ ಭಾವಿಪತಿ ಜೊತೆ ಹೊಸ ವರ್ಷ ಸೆಲೆಬ್ರೆಟ್ ಮಾಡಿರುವ ಘಳಿಗೆಯನ್ನು ಅಭಿಮಾನಿಗಳಿಗೆ ಒಂದು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಕೊಡಗು, ಅಲ್ಲಿನ ಕಾಫಿ ಪ್ಲಾಂಟೇಷನ್, ಕಾಫಿ ಹಣ್ಣು, ಕಾಳು ಮೆಣಸು, ಪಶ್ಚಿಮ ಘಟ್ಟಗಳು, ಕಾಡಾನೆ, ಕಾಡು ಕೋಣ ನೋಡಿರುವ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನು, ಈ ವಿಡಿಯೋದಲ್ಲಿ ಭಾವಿಪತಿ ಮುಖವನ್ನು ತೋರಸಲು ಅದಿತಿಗೆ ಸಾಧ್ಯವಾಗಿಲ್ಲ. ಹಿಂದೆ ತಿರುಗಿ ಕ್ಯಾಮೆರಾ ನೋಡಿ ಎಂದರು ಯಶಸ್ ಅವರು ನೋಡಿಲ್ಲ. ಸದ್ಯ, ನಟಿ ಶೇರ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.