

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟಿ ಸುಪುತ್ರ ದುಲ್ಕರ್ ಸಲ್ಮಾನ್ಮಾಲಿವುಡ್ನಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲೂ ಮಿಂಚಿದ್ದಾರೆ. ಇದುವರೆಗೂ ಸಿನಿಮಾಗಳಿಗಷ್ಟೇ ಸೀಮಿತವಾಗಿದ್ದ ಅವರು ಇದೀಗ "ಗನ್ಸ್ ಆ್ಯಂಡ್ ಗುಲಾಬ್ಸ್' ಮೂಲಕ ಒಟಿಟಿ ವೇದಿಕೆಗೆ ಎಂಟ್ರಿಯಾಗಿದ್ದು, ಮೊದಲ ವೆಬ್ಸರಣಿಯಲ್ಲಿ ನಟಿಸಿದ ಸಂಭ್ರಮದಲ್ಲಿದ್ದಾರೆ. ಈ ಸರಣಿ ಇದೇ ತಿಂಗಳ 18ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದ್ದು, ಆ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ಬೆಂಗಳೂರಿನ ನಂಟು, ಅಪ್ಪನ ಜತೆಗಿನ ಸ್ಪರ್ಧೆ, ವೆಬ್ಸರಣಿ ಎಂಟ್ರಿ, ಮುಂದಿನ ಸಿನಿಮಾ ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ಈ ಚಿಟ್ಚಾಟ್ನಲ್ಲಿ.