

ಬೆಂಗಳೂರು: ಹಾಸ್ಯನಟರು ನಾಯಕರಾಗಿ ಮಿಂಚಿದ್ದಾರೆ. ಕೋಮಲ್, ಶರಣ್ ಸೇರಿ ಹಲವರು ಆ ಸಾಲಿನಲ್ಲಿದ್ದಾರೆ. ಇದೀಗ ಅದೇ ರೀತಿ ಚಿಕ್ಕಣ್ಣ ಹೀರೋ ಆಗಿ ಎಂಟ್ರಿಕೊಡುವ ಸಿದ್ಧತೆಯಲ್ಲಿದ್ದಾರೆ.
ಈ ಮೊದಲೇ ಈ ವಿಚಾರ ಹೊರಬಿದ್ದಿತ್ತಾದರೂ, ಸಿನಿಮಾ ಶೀರ್ಷಿಕೆ ಏನು ಎಂಬಿತ್ಯಾದಿ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಆ ವಿಚಾರವನ್ನು ಹೇಳಿಕೊಳ್ಳಲೆಂದೆ ಚಿತ್ರತಂಡ, ದಿನಾಂಕವೊಂದನ್ನು ನಿಗದಿ ಮಾಡಿದೆ.
ಹೌದು, ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ನಟಿಸಲಿದ್ದು, ಅ. 19ರಂದು ಬೆಳಗ್ಗೆ 8ಗಂಟೆಗೆ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ. ಚಂದ್ರಮೋಹನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಉಮಾಪತಿ ಫಿಲಂಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಡಿಎನ್ ಸಿನಿಮಾಸ್ ನಿರ್ಮಾಣದ ಹೊಣೆ ಹೊತ್ತಿದೆ. ಈ ಮೊದಲು ಇದೇ ಬ್ಯಾನರ್ನಿಂದ ಒಂದಲ್ಲ ಎರಡಲ್ಲ ಚಿತ್ರ ನಿರ್ಮಾಣವಾಗಿತ್ತು. ಸುಧಾಕರ್ ಎಸ್.ರಾಜ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.