'ಡಿಸೆಂಬರ್​ 24' ಚಿತ್ರಕ್ಕೆ ದಿವ್ಯಾ ಆಚಾರ್​ ನಾಯಕಿ ...

December 24 - Divya Achar - Final
Published on

ಬೆಂಗಳೂರು: ಲಾಕ್​ಡೌನ್​ ನಂತರ ಹಲವು ಹೊಸ ಚಿತ್ರಗಳು ಸದ್ದಿಲ್ಲದೆ ಪ್ರಾರಂಭವಾಗಿವೆ. ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅಂತಹ ಚಿತ್ರಗಳ ಪೈಕಿ ನಾಗರಾಜ್​ ಎಂಜಿ ಗೌಡ ನಿರ್ದೇಶನದ ಸಸ್ಪೆನ್ಸ್​, ಥ್ರಿಲ್ಲರ್​ ಚಿತ್ರವಾದ 'ಡಿಸೆಂಬರ್​ 24' ಸಹ ಒಂದು.

ಸದ್ಯದಲ್ಲೇ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ದಿವ್ಯಾ ಆಚಾರ್​ ಸಹ ಒಬ್ಬರು. ಬಾಲ್ಯದಿಂದಲೂ ನಟನೆಯ ಬಗ್ಗೆ ಹೆಚ್ಚಿನ  ಆಸಕ್ತಿ ಬೆಳೆಸಿಕೊಂಡಿರುವ ದಿವ್ಯಾ ಆಚಾರ್, ಇದಕ್ಕೂ ಮುನ್ನ 'ಬಂಗಾರಪುರ' ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಆದರೆ, ಅದೇಕೋ ಆ ಚಿತ್ರ ನಿರ್ಮಾಣ ಹಂತದಲ್ಲೇ ಹಲವಾರು ಸಮಸ್ಯೆಗಳ ಕಾರಣದಿಂದ ಸ್ಥಗಿತಗೊಂಡಿತು. ಈಗ 'ಡಿಸೆಂಬರ್​ 24' ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ.

ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ದಿವ್ತಾ, ಎನ್ಮೋರಾ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್‌ಅಪ್ ಆಗಿದ್ದು. ಆ ನಂತರ ಕರ್ನಾಟಕದಲ್ಲೇ ಆಯೋಜಿಸಿದ್ದ ಸಾಂಪ್ರದಾಯಿಕ ಕಿಂಗ್ ಅಂಡ್ ಕ್ವೀನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತಕ್ಕೂ ಎಂಟ್ರಿಯಾಗಿದ್ದರು. ಈಗ ಅವರು 'ಡಿಸೆಂಬರ್​ 24' ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ನಟನೆಗೆ ಸವಾಲೊಡ್ಡುವಂಥ ಛಾಲೆಂಜಿಂಗ್ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ.

'ಡಿಸೆಂಬರ್ ೨೪' ಚಿತ್ರದಲ್ಲಿ ಸಸ್ಪೆನ್ಸ್ ಜತೆಗೆ ಲವ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿರುವ ಚಿತ್ರ. ಎ.ದೇವುಹಾಸನ್, ವಿ.ಬೆಟ್ಟೇಗೌಡ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ್ ಎಂ.ಜಿ.ಗೌಡ ಮೊದಲಬಾರಿಗೆ ಆಕ್ಷನ್‌-ಕಟ್ ಹೇಳಿದ್ದಾರೆ. ವೈದ್ಯಕೀಯ ಸಂಶೋಧನೆಯ ಸುತ್ತ ಹೆಣೆಯಲಾಗಿರುವ ಈ ಚಿತ್ರದ ಕಥೆಗೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಎಂಬಲ್ಲಿ ನಡೆದಂಥ ನೈಜ ಘಟನೆಯೇ  ಪ್ರೇರಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net