

ಕರೊನಾ ಲಾಕ್ಡೌನ್ ಶುರುವಾದ ಮೇಲೆ ಕಳೆದ ಆರೇಳು ತಿಂಗಳು ಮನೆಯಲ್ಲಿಯೇ ಠಿಕಾಣಿ ಹೂಡಿದ್ದ ಸಿನಿಮಾ ಮಂದಿ, ಲಾಕ್ಡೌನ್ ತೆರವಾಗುತ್ತಿದ್ದಂತೆ ವಿದೇಶಕ್ಕೆ ಹಾರಿ ಮಿಸ್ ಆಗಿದ್ದ ಪ್ರವಾಸದ ಮಜವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮಾಲ್ಡೀವ್ಸ್ ಬಹುತೇಕ ಎಲ್ಲ ಸಿನಿಮಾ ತಾರೆಯರ ನೆಚ್ಚಿನ ತಾಣವಾಗಿದೆ.
ಇತ್ತೀಚೆಗಷ್ಟೇ ನಟಿ ಕಾಜಲ್ ಮಾಲ್ಡೀವ್ಸ್ನಲ್ಲಿ ಹನಿಮೂನ್ ಸಹ ಮುಗಿಸಿಕೊಂಡು ಬಂದಿದ್ದರು. ಸ್ಯಾಂಡಲ್ವುಡ್ ನಟಿ ಪ್ರಣೀತಾ ಸುಭಾಶ್ ಸಹ ಮಾಲ್ಡೀವ್ಸ್ಗೆ ತೆರಳಿ ಎಳೆ ಬಿಸಿಲಿಗೆ ಮೈಯೊಡ್ಡಿ ಮರಳಿದ್ದರು. ಇದೀಗ ಮತ್ತೋರ್ವ ಚಂದನವನದ ನಟಿ ಶಾನ್ವಿ ಶ್ರೀವಾತ್ಸವ ಅದೇ ಮಾಲ್ಡೀವ್ಸ್ ಬೀಚ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮೊನ್ನೆಯಷ್ಟೇ ಮಾಲ್ಡೀವ್ಸ್ನ ಕಡಲ ಕಿನಾರೆಯಲ್ಲಿ ನಿಂತು ಸೆಲ್ಫಿ ಸ್ಟಿಕ್ ಹಿಡಿದು ಸರೋವರ ರಮಣೀಯ ದೃಶ್ಯ ಸೆರೆಹಿಡಿದು ಹಂಚಿಕೊಂಡಿದ್ದರು. ಇದೀಗ ಬಿಳಿ ಬಣ್ಣದ ಬಿಕಿನಿ ಉಡುಗೆಯಲ್ಲಿ ಬಿಸಿಲಿಗೆ ಮೈವೊಡ್ಡಿ ನಿಂತಿರುವ ಫೋಟೋವನ್ನು ಶಾನ್ವಿ ಶೇರ್ ಮಾಡಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಈಗಾಗಲೇ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದ್ದು, ಶಾನ್ವಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.