ರಶ್ಮಿಕಾ ಬೇಕು ಅಂತ ಜೂ. ಎನ್​ಟಿಆರ್​, ಕಿಯಾರಾ ಇರಲಿ ಅಂತ ನಿರ್ದೇಶಕರು... ಯಾವ ಚಿತ್ರ?

Rashmi
Published on

ಹೈದರಾಬಾದ್​: ರಶ್ಮಿಕಾ ಮಂದಣ್ಣ ಸದ್ಯ ಸೌತ್​ ಸಿನಿಮಾ ಇಂಡಸ್ಟ್ರಿಯ ಬಿಜಿಯೆಸ್ಟ್ ನಟಿಯಲ್ಲೊಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಅವಕಾಶಗಳ ಸರಮಾಲೆಯನ್ನೇ ಗಿಟ್ಟಿಸಿಕೊಳ್ಳುತ್ತ ಸಾಧನೆಯ ಶಿಖರದತ್ತ ಮುಖ ಮಾಡುತ್ತಿದ್ದಾರೆ. ಮಹೇಶ್​ ಬಾಬು, ನಿತಿನ್​, ಅಲ್ಲು ಅರ್ಜುನ್ ಜತೆ ನಟಿಸಿರುವ ರಶ್ಮಿಕಾ ಇದೀಗ ಜೂ. ಎನ್​ಟಿಆರ್​ಗೂ ಬೇಕಂತೆ!

ಅಂದರೆ, ತ್ರಿವಿಕ್ರಮ್ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಶುರುವಾಗಲಿದ್ದು, ಆ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಬೇಕೆಂಬುದು ಜೂ. ಎನ್​ಟಿಆರ್ ಆಸೆ. ಆದರೆ, ನಿರ್ದೇಶಕ ತ್ರಿವಿಕ್ರಮ್​ಗೆ ಮಾತ್ರ ಕಿಯಾರಾ ಅಡ್ವಾಣಿನೇ ಬೇಕಂತೆ.

ಸದ್ಯ ಸ್ಕ್ರಿಪ್ಟಿಂಗ್​ ಹಂತದಲ್ಲಿರುವ ಈ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇಬ್ಬರೂ ಸ್ಟಾರ್ ನಟಿಯರೇ ಆಗಿರುವುದರಿಂದ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತ ಎನ್​ಟಿಆರ್ ಆರ್​​ಆರ್​​ಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಆ ಚಿತ್ರದ ಬಳಿಕವೇ ಈ ಸಿನಿಮಾ ಸೆಟ್ಟೇರಲಿದೆ. ಆಗ ನಾಯಕಿ ಯಾರು ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

ಇನ್ನು ಕೆಲವೇ ವರ್ಷಗಳ ಹಿಂದೆ ರಶ್ಮಿಕಾ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಈಗ ಅವರು ಈ ವರ್ಷದ ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ’ ಆಗಿರುವುದಷ್ಟೇ ಅಲ್ಲ, ಸಮಂತಾ, ಪೂಜಾ ಹೆಗ್ಡೆ ಮುಂತಾದವರನ್ನು ಹಿಂದಿಕ್ಕಿದ್ದಾರೆ. ಸಂಭಾವನೆ ವಿಚಾರದಲ್ಲಿಯೂ ತುಂಬ ಮುಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net