7 ಬಾರಿ ಗರ್ಭಪಾತ: ನಟಿ ವಿಜಯಲಕ್ಷ್ಮೀ ಆರೋಪದ ಬೆನ್ನಲ್ಲೇ ನಿರ್ದೇಶಕ ಸೀಮನ್​ಗೆ ಚೆನ್ನೈ ಪೊಲೀಸರ ಬುಲಾವ್​

Actress Vijayalakshmi
Published on

ಚೆನ್ನೈ: ನಟಿ ವಿಜಯಲಕ್ಷ್ಮೀ ನೀಡಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ), ನಟ ಮತ್ತು ನಿರ್ದೇಶಕ ಸೀಮನ್​ ಅವರನ್ನು ಚೆನ್ನೈ ಪೊಲೀಸರು ಮಂಗಳವಾರ ವಿಚಾರಣೆ ನಡೆಸಲಿದ್ದಾರೆ.

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾನೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸೀಮನ್ ಅವರಿಗೆ ಸೂಚಿಸಲಾಗಿದ್ದರೂ, ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಜಯಲಕ್ಷ್ಮಿ ಕೂಡ ಇತ್ತೀಚೆಗೆ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರು. ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ವಿಜಯಲಕ್ಷ್ಮೀ, ಸೀಮನ್ ವಿರುದ್ಧ​ ಗಂಭೀರ ಆರೋಪ ಮಾಡಿದ್ದಾರೆ.

ತನಿಖೆ ಆರಂಭಿಸಿರುವ ಚೆನ್ನೈ ಪೊಲೀಸರು ವಿಜಯಲಕ್ಷ್ಮೀ ಅವರು ಮಾಡಿರುವ ಆರೋಪ ನಿಜವೇ ಎಂದು ತಿಳಿಯಲು ಸುಮಾರು 2 ಗಂಟೆಗಳ ಕಾಲ 4 ಮಂದಿ ಸ್ತ್ರೀರೋಗ ತಜ್ಞರ ಮೂಲಕ ನಟಿ ವಿಜಯಲಕ್ಷ್ಮಿ ಅವರ ಗರ್ಭಕೋಶಕ್ಕೆ ‘ಅಲ್ಟ್ರಾಸೌಂಡ್’ ಎಂಬ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಸೀಮನ್​ ಹೇಳಿಕೆ ಪಡೆಯಲಿದ್ದಾರೆ.

ವಿಜಯಲಕ್ಷ್ಮಿ 2011ರಲ್ಲಿ ಇದೇ ಆರೋಪದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ತನಿಖೆ ನಡೆಸಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದರು. ಆದರೆ ಡಿಎಂಕೆ ಸರ್ಕಾರದ ಮೇಲೆ ನಂಬಿಕೆ ಇದ್ದ ಕಾರಣ ಮತ್ತೆ ದೂರು ದಾಖಲಿಸಿದ್ದಾರೆ. ಕಮಿಷನರ್ ಕಚೇರಿಗೆ ದೂರು ನೀಡಿದ ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಗೌರವ ಕೊಡದ ಸೀಮನ್​ನನ್ನು ನ್ಯಾಯಾಲಯ ಮುಂದೆ ತಂದು ನಿಲ್ಲಿಸುವುದೇ ನನ್ನ ಗುರಿ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net