

ಎಲೋನ್ ಮಸ್ಕ್ ಶ್ರೀಮಂತ ವ್ಯಕ್ತಿ, ದೊಡ್ಡ ಕಂಪನಿ ಸಿಇಒ. 2023ರಲ್ಲಿ ಪ್ರಸ್ತುತ ವರ್ಷದಲ್ಲಿ ಇಲ್ಲಿಯವರೆಗೆ ಎಲೋನ್ ಮಸ್ಕ್ 81.8 ಶತಕೋಟಿ ಸಂಪಾದನೆ ಮಾಡಿದ್ದಾರೆ. ಮಸ್ಕ್ ಮದುವೆ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಮೂರು ಮದುವೆಯಾದ ಮಸ್ಕ್ ಗೆ ಹಲವೆಡೆ ಮಕ್ಕಳಿದ್ದಾರೆ. ಎಲೋನ್ ಮಸ್ಕ್ ಒಟ್ಟು ನಿವ್ವಳ ಆಸ್ತಿ ಮೌಲ್ಯವು 219 ಬಿಲಿಯನ್ ಡಾಲರ್.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮತ್ತು ಅವರ ರಹಸ್ಯ ಅವಳಿ ಮಕ್ಕಳೊಂದಿಗೆ (Twins) ಶಿವೋನ್ ಮೊದಲ ಬಾರಿಗೆ ಕಾಣಿಸಿಕೊಂಡರು. ಪ್ರಮುಖ ಮೆದುಳಿನ ತಂತ್ರಜ್ಞಾನ ಕಂಪನಿ ನ್ಯೂರಾಲಿಂಕ್ನಲ್ಲಿ ನಿರ್ದೇಶಕರಾಗಿರುವ ಜಿಲಿಸ್, ಮಸ್ಕ್ನೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡಿಲ್ಲ ಎಂದು ವರದಿಯಾಗಿದೆ. ವಿಟ್ರೊ ಫಲೀಕರಣ ವಿಧಾನದ ಮೂಲಕ ದಂಪತಿಗಳು ರಹಸ್ಯ ಅವಳಿ ಮಕ್ಕಳನ್ನು ಪಡೆದಿದ್ದಾರೆ ಜಿಲಿಸ್ ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ್ದರು.
ಶಿವೋನ್ ಜಿಲಿಸ್ ಯಾರು?
ಜಿಲಿಸ್ ಕೆನಡಾದ ಒಂಟಾರಿಯೊದ ಮಾರ್ಕಮ್ನಲ್ಲಿ ಪಂಜಾಬಿ ಭಾರತೀಯ ತಾಯಿ ಮತ್ತು ಕೆನಡಾದ ತಂದೆಗೆ ಜನಿಸಿದರು. ಜಿಲಿಸ್ ಮತ್ತು ಮಸ್ಕ್ ಅವರ ಸಂಬಂಧ ಹೆಚ್ಚು ಜನರಿಗೆ ತಿಳಿದಿಲ್ಲ. ಜಿಲಿಸ್ ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಪದವಿಗಳನ್ನು ಹೊಂದಿರುವ US ನ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಎಲೋನ್ ಮಸ್ಕ್ ಮೂರು ಮದುವೆಯಾಗಿದ್ದಾರೆ. ಮೊದಲ ಮದುವೆ ಕೆನಡಾದ ಬರಹಗಾರ ಜಸ್ಟಿನ್ ವಿಲ್ಸನ್ ಅವರೊಂದಿಗೆ 2000 ರಲ್ಲಿ ನಡೆಯಿತು. ಜಸ್ಟಿನ್ ವಿಲ್ಸನ್ 2004 ರಲ್ಲಿ ಗ್ರಿಫಿನ್ ಮತ್ತು ಕ್ಸೇವಿಯರ್ ಮಸ್ಕ್ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದರ ನಂತರ 2006 ರಲ್ಲಿ ವಿಲ್ಸನ್, ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದರು.
2008 ರಲ್ಲಿ ಮಸ್ಕ್, ವಿಲ್ಸನ್ ರಿಗೆ ವಿಚ್ಛೇದನ ನೀಡಿದ್ರು. 2010 ರಲ್ಲಿ ಅಮೇರಿಕನ್ ನಟಿ ತಲ್ಲುಲಾ ರಿಲೆ ಅವರನ್ನು ಮಸ್ಕ್ ವಿವಾಹವಾದರು. ಅವರಿಬ್ಬರೂ ಎರಡು ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. 2013 ರಲ್ಲಿ ಮಸ್ಕ್ ತಾಲುಲಾ ರಿಲೆಯೊಂದಿಗೆ ಮತ್ತೆ ವಿವಾಹವಾದರು. ಅದು 2016ರಲ್ಲಿ ಮತ್ತೆ ವಿಚ್ಛೇದನದಲ್ಲಿ ಕೊನೆಗೊಂಡಿತು. ಇದರ ನಂತರ, ಮಸ್ಕ್ ದೀರ್ಘಕಾಲದವರೆಗೆ ಸಿಂಗರ್ ಗ್ರಿಮ್ಸ್ ಜೊತೆ ಡೇಟಿಂಗ್ ನಲ್ಲಿದ್ದರು. ಅವರಿಗೂ ಒಬ್ಬ ಮಗನಿದ್ದಾನೆ. ಅವರ ಹೆಸರು X AE A-XII. ಇದಲ್ಲದೆ ಮಾರ್ಚ್ 2022 ರಲ್ಲಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವುದಾಗಿ ಗ್ರಿಮ್ಸ್ ಹೇಳಿದ್ದಾರೆ.