ಮಾಫಿಯಾಕ್ಕೆ ಮಮ್ಮಿ ನಿರ್ದೇಶಕ ಲೋಹಿತ್‌; ಗುರುಗೆ ಬೇರೆ ಸಿನಿಮಾ?

Mafia
Published on

ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರತಂಡದಿಂದ ಹೊಸದೊಂದು ಅಪ್​ಡೇಟ್ ಬಂದಿದೆ. ಮುಂಚೆ ಈ ಚಿತ್ರವನ್ನು ‘ಅಂಬಿ ನಿಂಗ್ ವಯಸ್ಸಾಯ್ತೋ’ ನಿರ್ದೇಶಿಸಿದ್ದ ಗುರುದತ್ ಗಾಣಿಗ ನಿರ್ದೇಶಿಸಬೇಕಿತ್ತು. ಈಗ ನಿರ್ದೇಶನದ ಜವಾಬ್ದಾರಿಯನ್ನು ‘ಮಮ್ಮಿ’ ಚಿತ್ರ ಖ್ಯಾತಿಯ ನಿರ್ದೇಶಕ ಲೋಹಿತ್ ವಹಿಸಿಕೊಂಡಿದ್ದಾರೆ.

ಗುರುದತ್ ಗಾಣಿಗ ಚಿತ್ರತಂಡದಿಂದ ಹೊರನಡೆದಿದ್ದೇಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಈ ಚಿತ್ರ ಬಿಟ್ಟು ಅವರು ಪ್ರಜ್ವಲ್ ಅಭಿನಯದಲ್ಲೇ ಇನ್ನೊಂದು ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆ ಬಿಟ್ಟ ಸ್ಥಳ ತುಂಬಲು ಲೋಹಿತ್ ಬಂದಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಲೋಹಿತ್, ‘ಪ್ರಜ್ವಲ್ ಅಭಿನಯದ ‘ಮಾಫಿಯಾ’ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಕಥೆಯ ಒನ್​ಲೈನ್ ಅದೇ ಇರಲಿದೆ. ಚಿತ್ರಕಥೆ ಸ್ವಲ್ಪ ಬದಲಾಗಿದ್ದು, ಬರವಣಿಗೆ ಕೆಲಸ ಮುಗಿದಿದೆ. ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನವೆಂಬರ್ 1ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ.

ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್​ನಲ್ಲಿ ಕುಮಾರ್ ಬಿ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಪ್ರಜ್ವಲ್​ಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net