More

    ಜಗಳದ ನಡುವೆ ಶೂಟೌಟ್: ಮಗನಿಗೇ ಬಿತ್ತು ಅಪ್ಪನ ಗುಂಡು

    ಮಂಗಳೂರು: ಸಿಬ್ಬಂದಿಯೊಂದಿಗೆ ಜಗಳವಾಡುತ್ತಾ ಗನ್​ ತಂದು ಗುಂಡು ಹಾರಿಸಿದ ವ್ಯಕ್ತಿ, ತನ್ನ ಮಗನ ತಲೆಗೇ ಗುಂಡು ಹಾರಿಸಿರುವ ಘಟನೆ ಮಂಗಳೂರಿನ ಮಾರ್ಗನ್ಸ್ ಗೇಟ್​​ನಲ್ಲಿ ನಡೆದಿದೆ. ಈ ಶೂಟೌಟ್ ಪ್ರಕರಣದಲ್ಲಿ ಗಾಯಗೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುಧೀಂದ್ರನ ಸ್ಥಿತಿ ಗಂಭೀರವಾಗಿದೆ. ಗುಂಡು ಹಾರಿಸಿದ ತಂದೆ ರಾಜೇಶ್​ ಪ್ರಭು ಎದೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿದ್ದಾನೆ.

    ಆರೋಪಿ ರಾಜೇಶ್ ಪ್ರಭು ಮತ್ತು ಇಬ್ಬರು ಸಿಬ್ಬಂದಿ ನಡುವೆ ಸಂಬಳದ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಈ ವೇಳೆ ಮಗ ಸುಧೀಂದ್ರ ಅವರ ಮೇಲೆ ಹಲ್ಲೆಗೆ ಯತ್ನಿಸಿದ. ಆಗ ಪರಸ್ಪರ ಗಲಾಟೆ ಹೆಚ್ಚಾಗಿ ರಾಜೇಶ್ ಪ್ರಭು ತನ್ನ ಲೈಸೆನ್ಸಡ್​ ರಿವಾಲ್ವಾರ್ ಹಿಡಿದುಕೊಂಡು ಬಂದ. ಗಲಾಟೆ ಮಧ್ಯೆ ಎರಡು ರೌಂಡ್ ಬುಲೆಟ್ಸ್​ ಫೈರ್ ಆಗಿದ್ದು. ಬಾಲಕ ಸುಧೀಂದ್ರನ ತಲೆಗೆ ಗುಂಡೇಟು ಬಿದ್ದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ಬೆಲೆ ಏರಿಕೆ ಮಾಫಿಯ ಬಗ್ಗೆ ಮಾತಾಡಿ: ಬಿಜೆಪಿ ನಾಯಕರಿಗೆ ಎಚ್​​ಡಿಕೆ ಸವಾಲು

    ಗುಂಡು ಬಾಲಕನ ತಲೆಯನ್ನು ಸೀಳಿ ಹೋದ ಕಾರಣ ಮೆದುಳಿನ ಭಾಗಕ್ಕೆ ಏಟು ಬಿದ್ದಿದ್ದು, ಆತನ ಸ್ಥಿತಿ ತೀರಾ ಗಂಭೀರವಾಗಿದೆ. ಪ್ರಕರಣದ ಸಂಬಂಧವಾಗಿ ಆರೋಪಿ ರಾಜೇಶ್ ಪ್ರಭುವನ್ನು ಪೊಲೀಸರು ವಶಕ್ಕೆ ಪಡೆದರು. ಸದ್ಯ, ಆರೋಪಿಗೆ ಎದೆ ನೋವು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಡಿಸ್​​ಚಾರ್ಜ್ ಆದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.

    ಲಖೀಂಪುರ್​ ಖೇರಿಗೆ ಕಾಂಗ್ರೆಸ್​ ನಾಯಕರ ನಿಯೋಗ; ಅನುಮತಿ ನೀಡಿದ ಯುಪಿ ಸರ್ಕಾರ

    ಮಕ್ಕಳಾಗದ ದಂಪತಿಗಳೇ ಇವರ ಟಾರ್ಗೆಟ್​! ಬಾಡಿಗೆ ತಾಯಿ ಹೆಸರಲ್ಲಿ ಬಡ ಮಕ್ಕಳ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts