ಬೆಂಗಳೂರು: ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ನಟಿಯರಲ್ಲಿ ಒಬ್ಬರು ಎಂದೇ ಹೇಳಬೇಕು. ಹೌದು, ಡಿ.31ಕ್ಕೆ ರಿಲೀಸ್ ಆಗಲಿರುವ 'ಲವ್ ಯು ರಚ್ಚು' ಚಿತ್ರ, ಜನವರಿ 21ಕ್ಕೆ ಬಿಡುಗಡೆಯಾಗಲಿರುವ 'ಏಕ್ ಲವ್ ಯಾ' ಚಿತ್ರ, ಚಂದನ್ ಶೆಟ್ಟಿ ಜೊತೆ ಹೊಸ ವರ್ಷದ ವಿಶೇಷ ಹಾಡು, ಮತ್ತೊಂದಿಷ್ಟು ಸಿನಿಮಾಗಳು, ಹಾಡುಗಳು ಅಂತ ರಚಿತಾ ರಾಮ್ ಇತ್ತೀಚೆಗೆ ಯಾರ ಕೈಗೂ ಸಿಗದಷ್ಟು ಕೆಲಸದಲ್ಲಿ ಬ್ಯೂಸಿಯಾಗಿ ಬಿಟ್ಟರು. ಇದೀಗ, ತಮ್ಮ ವಿರಾಮವಿಲ್ಲದ ಕೆಲಸವೇ ನಟಿಯ ಅನಾರೋಗ್ಯಕ್ಕೆ ಕಾರಣವಾಗಿದೆ.