

ಬೆಂಗಳೂರು: 'ಮಕ್ಳು ಸೋಲ್ಬಾರ್ದು ಕಣೋ. ಮಕ್ಳು ಸೋತ್ರೆ ಅಪ್ಪ-ಅಮ್ಮ ಸೋತಂಗೆ ಕಣೋ ...'
ಅಲ್ಲಿಯವರೆಗೂ ತಮಾಷೆಯೊಂದಿಗೆ ಸಾಗುವ ಟ್ರೇಲರ್, ಮಗನಿಗೆ ಇಂಥದ್ದೊಂದು ಮಾತು ಹೇಳುವ ಮೂಲಕ ಗಂಭೀರವಾಗುತ್ತದೆ. 'ದಿಲ್ ಪಸಂದ್' ಒಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಚಿತ್ರ, ಇದರಲ್ಲಿ ಒಂದಿಷ್ಟು ಮಜ ಇರಬಹುದು ಎಂದುಕೊಂಡಿದ್ದವರಿಗೆ, ಚಿತ್ರದಲ್ಲಿ ಸೆಂಟಿಮೆಂಟ್ ಸಹ ಇದೆ ಎಂಬುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ಗೆ ಅಮಲಾ ಪೌಲ್; ‘ಭೋಲಾ’ ಚಿತ್ರದಲ್ಲಿ ನಟನೆ
'ಡಾರ್ಲಿಂಗ್' ಕೃಷ್ಣ ನಾಯಕನಾಗಿ ನಟಿಸಿರುವ 'ದಿಲ್ ಪಸಂದ್' ಚಿತ್ರವು ಇದೇ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್ನ್ನು, ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಇಂದು ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ.
ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಪ್ರೇಮಕಥೆಯ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸಹ ಈ ಚಿತ್ರದಲ್ಲಿದ್ದು, ಕೃಷ್ಣಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ಅಜೇಯ್ ರಾವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಪಾತ್ರ ಬರಲಿದ್ದು, ಚಿತ್ರಕ್ಕೆ ಅವರ ಪಾತ್ರ ಟ್ವಿಸ್ಟ್ ಕೊಡಲಿದೆಯಂತೆ.
'ದಿಲ್ ಪಸಂದ್'ಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.