ಪ್ರತಿಜ್ಞೆ ಮುರಿದು ತೆರೆ ಮೇಲೆ ಕಿಸ್ ಮಾಡಿದರಾ ಸಲ್ಮಾನ್?

Salman Khan - Final
Published on

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರವು ಮೇ ೧೩ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಕೆಲವು ದಿನಗಳ ಹಿಂದೆ ಟ್ರೇಲರ್ ಸಹ ಬಿಡುಗಡೆಯಾಗಿದೆ. ಯಾವಾಗ ಟ್ರೇಲರ್ ಬಿಡುಗಡೆಯಾಯಿತೋ, ಆಗಿನಿಂದಲೂ ಸಲ್ಮಾನ್ ಅಭಿಮಾನಿಗಳಲ್ಲಿ ಒಂದು ಗುಸುಗುಸು ಕೇಳಿಬರುತ್ತಲೇ ಇತ್ತು. ಸಲ್ಮಾನ್ ಏನಾದರೂ ಬಹುವರ್ಷಗಳ ಪ್ರತಿಜ್ಞೆ ಮರೆತುಬಿಟ್ಟರಾ ಎಂದು. ಈಗ ಕೊನೆಗೂ ಸಲ್ಮಾನ್ ಅಭಿಮಾನಿಗಳೇ ಅದಕ್ಕೆ ಉತ್ತರ ಕಂಡುಕೊAಡಿದ್ದು, ತಮ್ಮ ನೆಚ್ಚಿನ ನಟ ಪ್ರತಿಜ್ಞೆ ಮುರಿದಿಲ್ಲ ಎಂದು ಖುಷಿಯಾಗಿದ್ದಾರೆ.

ವಿಷಯವೇನೆಂದರೆ, ಸಲ್ಮಾನ್ ಇದುವರೆಗೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಇದುವರೆಗೂ ಯಾವೊಂದು ಚಿತ್ರದಲ್ಲೂ ತೆರೆಯ ಮೇಲೆ ಕಿಸ್ ಮಾಡಿದ ಉದಾಹರಣೆ ಇಲ್ಲವಂತೆ. ನಾಯಕಿ ಜೊತೆಗೆ ಅದೆಷ್ಟೇ ರೊಮ್ಯಾಂಟಿಕ್ ದೃಶ್ಯಗಳಿದ್ದರೂ, ಸಲ್ಮಾನ್ ಮಾತ್ರ ಯಾವೊಂದು ಚಿತ್ರದಲ್ಲೂ ಕಿಸ್ ಮಾಡಿರಲಿಲ್ಲ. ಆದರೆ, `ರಾಧೆ' ಚಿತ್ರದ ಒಂದು ದೃಶ್ಯದಲ್ಲಿ ನಾಯಕಿ ದಿಶಾ ಪಠಾಣಿ ಬಾಯಿಗೆ, ಸಲ್ಮಾನ್ ಮುತ್ತಿಡುವ ಒಂದು ಶಾಟ್ ಇದೆ. ಇದನ್ನು ನೋಡಿ, ಸಲ್ಮಾನ್ ತಮ್ಮ ಪ್ರತಿಜ್ಞೆ ಮುರಿದುಬಿಟ್ಟರಾ ಎಂಬ ಆತಂಕ ಅಭಿಮಾನಿಗಳವಲಯದಲ್ಲಿತ್ತು.

ಈ ದೃಶ್ಯದ ಸ್ಕಿçÃನ್‌ಶಾಟ್ ತೆಗೆದು ಜೂಮ್ ಇನ್ ಮಾಡಿ ನೋಡಿದ್ದಾರೆ. ಸೂಕ್ಷö್ಮವಾಗಿ ಈ ಶಾಟ್ ನೋಡಿದರೆ, ಅದರಲ್ಲಿ ದಿಶಾ ಪಠಾಣಿ ಬಾಯಿಗೆ ಟೇಪ್ ಹಾಕಿರುವುದು ಕಾಣಿಸುತ್ತದೆ. ಹಾಗಾಗಿ, ಇದು ನಿಜವಾದ ಕಿಸ್ ದೃಶ್ಯವಲ್ಲ, ಇದೊಂದು ಫೇಕ್ ದೃಶ್ಯ ಎಂಬ ಅಭಿಪ್ರಾಯಕ್ಕೆ ಅಭಿಮಾನಿಗಳು ಬಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೆಚ್ಚಿನ ನಟ ಇಷ್ಟು ವರ್ಷಗಳ ಪ್ರತಿಜ್ಞೆಯನ್ನು ಮುರಿದಿಲ್ಲ ಎಂದು ಬಹಳ ಖುಷಿಯಾಗಿದ್ದಾರೆ.

`ರಾಧೆ' ಚಿತ್ರದಲ್ಲಿ ಸಲ್ಮಾನ್, ದಿಶಾ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸಿದ್ದು, ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಲಾಕ್‌ಡೌನ್ ಇಲ್ಲದ ಕಡೆ `ರಾಧೆ' ಚಿತ್ರವು ಮೇ ೧೩ರಂದು ಲಾಕ್‌ಡೌನ್ ಇಲ್ಲದ ಕಡೆ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜತೆಗೆ ಓಟಿಟಿಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net