More

    ಕಿಸ್ ಹುಡುಗಿಯ ಮೊದಲ ತೆಲುಗು ಹಾಡು

    ಬೆಂಗಳೂರು: ‘ಕಿಸ್’ ಸಿನಿಮಾ ಮೂಲಕ ಚಂದನವನಕ್ಕೆ ಬಂದು ‘ಭರಾಟೆ’ ಮೂಲಕ ಸದ್ದು ಮಾಡಿದ್ದ ನಟಿ ಶ್ರೀಲೀಲಾ, ಇದೀಗ ಕನ್ನಡದಲ್ಲಿ ‘ದುಬಾರಿ’ ಮತ್ತು ‘ಬೈಟುಲವ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ‘ಪೆಳ್ಳಿ ಸಂದಡಿ’ ಮೂಲಕ ಪಕ್ಕದ ಟಾಲಿವುಡ್​ಗೂ ಪ್ರಯಾಣ ಬೆಳೆಸಿ ರುವುದು ಗೊತ್ತಿರುವ ವಿಚಾರವೇ. ಇದೀಗ ಅದೇ ಚಿತ್ರದಿಂದ ಮತ್ತೆ ನಟಿ ಶ್ರೀಲೀಲಾ ಸುದ್ದಿ ಯಲ್ಲಿದ್ದಾರೆ.

    ಗೌರಿ ರೊನಂಕಿ ನಿರ್ದೇಶನದ ‘ಪೆಳ್ಳಿ ಸಂದಡಿ’ ಸಿನಿಮಾದಲ್ಲಿ ತೆಲುಗಿನ ಹಿರಿಯ ನಟ ಶ್ರೀಕಾಂತ್ ಪುತ್ರ ಮೇಕ ರೋಷನ್ ನಾಯಕನಾಗಿ ಈ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ಶ್ರೀಲೀಲಾ ಜೋಡಿಯಾಗಿದ್ದು, ಅದೇ ಚಿತ್ರದ ‘ಪ್ರೇಮಂಟೆ ಏಂಟಿ …’ ಎಂಬ ಲಿರಿಕಲ್ ಹಾಡು, ಬುಧವಾರ ಬಿಡುಗಡೆ ಆಗಿದೆ. ಕೀರವಾಣಿ ಸಂಗೀತದಲ್ಲಿ ಹಾಡು ಮೂಡಿಬಂದಿದ್ದು, ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ. ಅಂದಹಾಗೆ, 1996ರಲ್ಲಿ ಶ್ರೀಕಾಂತ್ ನಟಿಸಿದ್ದ ‘ಪೆಳ್ಳಿ ಸಂದಡಿ’ ಚಿತ್ರವನ್ನೇ ಈಗಿನ ಕಾಲಘಟ್ಟಕ್ಕೆ ಹೊರಳಿಸಿ ತೆರೆಗೆ ತರುತ್ತಿದ್ದಾರೆ ನಿರ್ದೇಶಕಿ ಗೌರಿ.

    ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್, ಈ ಚಿತ್ರದ ನಿರ್ದೇಶನದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪಕ್ಕಾ ಕಮರ್ಷಿಯಲ್ ಲವ್ ಸ್ಟೋರಿ ಇರುವ ಈ ಚಿತ್ರ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದು, ಪೋಸ್ಟ್​ಪ್ರೊಡಕ್ಷನ್ ನಡೆಯುತ್ತಿದೆ.

    ಹೊಸ ಚಿತ್ರದಲ್ಲಿ ದೀಪಿಕಾ ಪಾತ್ರ ಏನಿರಬಹುದು ಗೆಸ್​ ಮಾಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts