ತುಟಿ ಕಚ್ಚಿದರಾ ಕಂಗನಾ? ನಟ ವೀರ್ ದಾಸ್‌ಗೆ ಕಚ್ಚಿದ ಬಗ್ಗೆ ಬಾಲಿವುಡ್ ನಟಿಯ ಸ್ಪಷ್ಟನೆ

kangana
Published on

ಕೆಲವೊಮ್ಮೆ ಸನ್ನಿವೇಶಗಳ ಚಿತ್ರೀಕರಣದ ವೇಳೆ ಕೆಲ ನಟ, ನಟಿಯರು ಮೈಮರೆತು ತಲ್ಲೀನರಾಗಿಬಿಡುತ್ತಾರೆ. ಅದೇ ರೀತಿ ಕಂಗನಾ ರಣಾವತ್ ಕೂಡ ಮೈಮರೆತು ನಟನಿಗೆ ಕಚ್ಚಿದ್ದರು ಎಂಬ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದೆ.

2014ರಲ್ಲಿ ಬಿಡುಗಡೆಯಾದ ಸಾಯಿ ಕಬೀರ್ ನಿರ್ದೇಶನದ ‘ರಿವಾಲ್ವರ್ ರಾಣಿ’ ಚಿತ್ರದ ರೊಮ್ಯಾಂಟಿಕ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ನಾಯಕ ವೀರ್ ದಾಸ್ ಮತ್ತು ನಾಯಕಿ ಕಂಗನಾ ನಡುವೆ ಚುಂಬಿಸುವ ದೃಶ್ಯವಿದ್ದು, ಆ ವೇಳೆ ಮೈಮರೆತ ಕಂಗನಾ ವೀರ್ ದಾಸ್ ತುಟಿ ಕಚ್ಚಿ ಗಾಯ ಮಾಡಿದ್ದರು ಎಂಬ ಸುದ್ದಿ ಜಾಲತಾಣದಲ್ಲಿ ಹಬ್ಬಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, ‘ಹೃತಿಕ್ ರೋಷನ್ ಬಳಿಕ, ಪಾಪ ವೀರ್ ದಾಸ್ ಶೀಲ ಹಾಳು ಮಾಡಿದ್ದೀನಂತೆ ನಾನು. ಇದು ಯಾವಾಗ ಆಯಿತು?’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಆ ಮೂಲಕ ಮತ್ತೆ ಹೃತಿಕ್ ರೋಷನ್ ಹೆಸರನ್ನು ಬಹಿರಂಗವಾಗಿ ಚರ್ಚಿಸಿ, ಒಂದೇ ಪೋಸ್ಟ್‌ನಲ್ಲಿ ಎರಡು ವಿವಾದಗಳನ್ನು ಸೃಷ್ಟಿಸಿದ್ದಾರೆ. ಸದ್ಯ ಕಂಗನಾ ‘ಎಮರ್ಜೆನ್ಸಿ’ ಹಾಗೂ ‘ತೇಜಸ್’ ಚಿತ್ರಗಳಲ್ಲಿ ಬಿಜಿಯಿದ್ದಾರೆ.(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net