ಪ್ರಭಾಸ್​ ಚಿತ್ರಕ್ಕೆ ಕಾತರ!; ಮೇ ತಿಂಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಯ್ತ 'ಕಲ್ಕಿ 2898 AD'?

Untitled design - 2023-07-24T204648.714
Published on

ಮುಂಬೈ: ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರದ ಕುರಿತು ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ, ನಿರೀಕ್ಷೆಗಳು ಹೆಚ್ಚುತ್ತಿದ್ದು, ಚಿತ್ರವನ್ನು ಘೋಷಿಸಿದ ದಿನಾಂಕದಂದು ಚಿತ್ರತಂಡ ಬಿಡುಗಡೆಗೊಳಿಸಲಿದೆಯೇ? ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಅಚ್ಚರಿ ಸುದ್ದಿಯೊಂದು ಕೇಳಿಬಂದಿದೆ. ಚಿತ್ರ ಮುಂದಿನ ವರ್ಷ ಮೇ ತಿಂಗಳಲ್ಲಿ ತೆರೆಯ ಮೇಲೆ ಬರಲಿದೆ ಎಂದು ಇತ್ತೀಚಿನ ವರದಿ ಮಾಹಿತಿ ನೀಡಿದೆ.

ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ಅವರ 'ಕಂಗುವ' ಕೂಡ ಭಾರೀ ಸದ್ದು ಮಾಡಿದ್ದು, ಚಿತ್ರರಸಿಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಕಂಗುವ ಸಿನಿಮಾ ಕೂಡ 2024ರ ಜನವರಿಯಲ್ಲಿ ರಿಲೀಸ್​ ಆಗಲು ಸಜ್ಜಾಗಿದ್ದು, ಇದೀಗ ಪ್ರಭಾಸ್​ ಅಭಿನಯಿಸಿರುವ ಕಲ್ಕಿ 2898 AD ಮೇಲೆ ಕೂಡ ಸಾಕಷ್ಟು ಭರವಸೆ ಮತ್ತು ಕುತೂಹಲ ಹೆಚ್ಚಿದೆ. ಈ ಹಿಂದಿನ ವರದಿಯ ಪ್ರಕಾರ, ಚಿತ್ರವು ಜನವರಿ 12, 2024 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಮೇ 9, 2024ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ಕಲ್ಕಿ 2898 AD ಚಿತ್ರದ ನಿರ್ಮಾಪಕ ಅಶ್ವಿನಿ ದತ್ ಮೇ 9 ರಂದು ಬಿಡುಗಡೆಗೊಳಿಸಲು ಚಿಂತಿಸಿದ್ದು, ಈ ದಿನ ಅವರಿಗೆ ಬಹಳ ವಿಶೇಷ ಎಂದು ಹೇಳಲಾಗಿದೆ. ಸದ್ಯ ಪ್ರಭಾಸ್​​ ನಟನೆಯ ಚಿತ್ರಕ್ಕೆ ಭಾರೀ ನಿರೀಕ್ಷೆಗಳು ವ್ಯಕ್ತವಾಗಿದ್ದು, ಸೈನ್​-ಫಿಕ್ಷನ್ ಸಿನಿಮಾ ಯಾವ ರೀತಿ ಕಮಾಲ್​ ಮಾಡಲಿದೆ ಎಂಬ ಲೆಕ್ಕಾಚಾರಗಳು ಚಿತ್ರರಂಗದಲ್ಲಿ ನಡೆಯುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net