‘ಬಂಪರ್’ ಬದಿಗಿಟ್ಟು ‘ಬೈ ಟು ಲವ್’ ಸವಿಯಲು ಹೊರಟ ಧನ್ವೀರ್, ಹರಿಸಂತು

EqD3JjiVoAAUq24 - Copy
Published on

ಬೆಂಗಳೂರು: ಧನ್ವೀರ್ ಗೌಡ ಮತ್ತು ನಿರ್ದೇಶಕ ಹರಿಸಂತು ಕಾಂಬಿನೇಷನ್​ನಲ್ಲಿ ಈ ಮೊದಲೇ ಬಂಪರ್ ಸಿನಿಮಾ ಘೋಷಣೆಯಾಗಿತ್ತು. ಸೆಪ್ಟೆಂಬರ್​ನಲ್ಲಿ ನಾಯಕನ ಜನ್ಮದಿನದ ಹಿನ್ನೆಲೆಯಲ್ಲಿ ಟೀಸರ್ ಸಹ ರಿಲೀಸ್ ಆಗಿತ್ತು. ಆದರೆ ಇದೀಗ ಅದೇ ಜೋಡಿ ಬೈಟು ಲವ್ ಶೀರ್ಷಿಕೆಯ ಹೊಸ ಸಿನಿಮಾದ ಮುಹೂರ್ತವನ್ನೂ ಮುಗಿಸಿಕೊಂಡಿದೆ.

ಕ್ರಿಸ್​ಮಸ್ ಪ್ರಯುಕ್ತ ವಿವಿ ಪುರಂನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಇಡೀ ತಂಡ ಮುಹೂರ್ತ ಮಾಡಿಕೊಂಡಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್​ಗೆ ಚಾಲನೆ ನೀಡಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಸುಪ್ರಿತ್ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಧನ್ವೀರ್​ಗೆ ಶ್ರೀಲೀಲಾ ಜೋಡಿಯಾಗಿದ್ದಾರೆ.

ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಚಿತ್ರಕ್ಕೆ ಇತ್ತೀಚೆಗಷ್ಟೇ ನಾಯಕಿಯಾಗಿದ್ದ ಶ್ರೀಲೀಲಾ, ಈಗ ಧನ್ವೀರ್​ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಜನವರಿಯಿಂದ ಈ ಚಿತ್ರ ಪ್ರಾರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಧನ್ವೀರ್ ಅಭಿನಯದ ‘ಬಂಪರ್’ ಚಿತ್ರವು ಹೊಸ ವರ್ಷಕ್ಕೆ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಅದರ ಬದಲು ಅದೇ ತಂಡದೊಂದಿಗೆ ಇನ್ನೊಂದು ಚಿತ್ರ ಮಾಡಲಿದ್ದಾರೆ ಧನ್ವೀರ್.

ಈ ತಲೆಮಾರಿನ ಮದುವೆ ಮತ್ತು ಜೀವನದ ಸುತ್ತ ಸುತ್ತ ಈ ಸಿನಿಮಾ ಸುತ್ತಲಿದೆಯಂತೆ. ಈ ತಲೆಮಾರಿನವರಿಗೆ ಮದುವೆ ಮತ್ತು ಮಕ್ಕಳ ಕುರಿತಾಗಿ ಹಿಂಜರಿಕೆ ಇದೆ. ಯಾಕೆ ಹೀಗಾಗುತ್ತಿದೆ ಎನ್ನುವುದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎಂಬುದು ನಿರ್ದೇಶಕ ಹರಿ ಸಂತು ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net